ಆಪ್ ಕ್ರ್ಯಾಶ್: 70 ಮಿಲಿಯನ್ ಬಳಕೆದಾರರು ಕಳೆದುಕೊಂಡ ವಾಟ್ಸಾಪ್,FB
ನವದೆಹಲಿ: ವಾಟ್ಸಾಪ್ ಇತ್ತೀಚೆಗೆ ಜಾಗತಿಕವಾಗಿ ಭಾರೀ ಹಿನ್ನಡೆಯನ್ನು ಅನುಭವಿಸಿದ ಕಾರಣ , 70 ಮಿಲಿಯನ್ ಬಳಕೆದಾರರರು ಹೊರಗೆ ಹೋಗಿ ಟೆಲಿಗ್ರಾಂ ಸೇರಿಕೊಂಡಿದ್ದಾರೆ ಎನ್ನಲಾಗಿದೆ.ಸೋಮವಾರ ಸಂಜೆ ವಾಟ್ಸಾಪ್ ಜೊತೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಸುಮಾರು ಆರು ಗಂಟೆಗಳ ಕಾಲ ಸರ್ವರ್ ಡೌನ್ ಆಗಿತ್ತು ದೋಷಪೂರಿತ ಈ ಕೆಲಸದಿಂದಾದ ಜಗತ್ತಿನಾದ್ಯಂತ 3.5 ಬಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಇದೇ ವೇಳೆ ಇರದ ಪ್ರತಿತಿಸ್ಪರ್ಧಿಗಳಾದ ಟೆಲಿಗ್ರಾಮ್ ಮತ್ತು ಸಿಗ್ನಲ್ ದೊಡ್ಡ ಲಾಭವನ್ನು ಮಾಡಿಕೊಂಡಿದ್ದು, ತಮ್ಮ ಕಡೆಗೆ ಕೋಟ್ಯಾಂತರ ಗ್ರಾಹಕರನ್ನು ಸೆಳೆದುಕೊಂಡಿದೆ ಎನ್ನಲಾಗಿದೆ. ಬಹುಶಃ ಫೇಸ್‌ಬುಕ್ ಉದ್ಯೋಗಿ ಕಂಪನಿಯ ಸರ್ವರ್‌ಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಹಲವರು ಊಹಿಸಿದ್ದಾರೆ.