`RSS' ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು : ಸಚಿವ ಪ್ರಭುಚೌಹಾಣ್
ಬೆಂಗಳೂರು : ಆರ್ ಎಸ್‌ಎಸ್ (RSS) ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ (Former CM HD Kumaraswamy, Siddaramaiah) ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಚಿವ ಪ್ರಭು ಚೌಹಾಣ್ (Minister Prabhu Chauhan) ತಿರುಗೇಟು ಕೊಟ್ಟಿದ್ದಾರೆ.
ಆರ್ ಎಸ್‌ಎಸ್ ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್‌ನವರೇ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನ ಸಹಿಸಲು ಆಗದೆ ಹೀಗೆಲ್ಲಾ ಮಾತನಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ ಎಸ್‌ಎಸ್ ದೇಶಭಕ್ತಿಯ ಸಂಸ್ಥೆ, ದೇಶದ ಪರ ಕೆಲಸ ಮಾಡ್ತಿದೆ. ಆರ್‌ಎಸ್‌ಎಸ್ ಇರೋದಕ್ಕೆ ದೇಶ ಇದೆ. ಮಾಜಿ ಸಿಎಂ ಹೇಗೆ ಮಾತಾಡಬೇಕೆಂದು ತಿಳಿದುಕೊಳ್ಳಲಿ. ಆರ್‌ಎಸ್‌ಎಸ್ ಏನು ಎಂಬುದು ಜನರಿಗೆ ಗೊತ್ತಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ಖಂಡಿಸುತ್ತೇನೆ. ಎಂದು ಪ್ರಭು ಚೌಹಾಣ್ ಟೀಕಿಸಿದ್ದಾರೆ.