ಬೆಂಗಳೂರು ಬಸ್‌ ಪ್ರಯಾಣಿಕರಿಗೆ ಬಿಗ್‌ ಶಾಕ್‌ : ಬಿಎಂಟಿಸಿ ವಜ್ರ ಬಸ್ ದರ ಏರಿಕೆ

ಬೆಂಗಳೂರು ಬಸ್‌ ಪ್ರಯಾಣಿಕರಿಗೆ ಬಿಗ್‌ ಶಾಕ್‌ : ಬಿಎಂಟಿಸಿ ವಜ್ರ ಬಸ್ ದರ ಏರಿಕೆ

ಬೆಂಗಳೂರು : ಸಿಲಿಕಾನ್‌ ಸಿಟಿ ಬಸ್‌ ಪ್ರಯಾಣಿಕರಿಗೆ ಮಹಾನಗರ ಸಾರಿಗೆ ಸಂಸ್ಥೆ ಬಿಗ್‌ ಶಾಕ್‌ ನೀಡಿದ್ದು, ಇದೀಗ ಬಿಎಂಟಿಸಿ ವಜ್ರ ಬಸ್ ದರ ಗಗನಕ್ಕೇರಲಿದೆ ಎಂದು ಹೊಸ ಆದೇಶ ಹೊರಡಿಸಿದ್ದಾರೆ.ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ಹಿತ ದೃಷ್ಟಿಯಿಂದ ಜನವರಿ 1 ರಿಂದ ಹವಾ ನಿಯಂತ್ರಿತ ಬಸ್‌ನ ದೈನಂದಿನ, ಮಾಸಿಕ ಪಾಸ್‌ಗಳ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜನವರಿ 5 ರಿಂದ ದೂರದ ಪ್ರಯಾಣ ದರ ಕೂಡ ಹೆಚ್ಚಳವಾಗುವ ಸಾಧ್ಯತೆಯಿದೆ ಜನಸಮಾನ್ಯರ ಬೇಬಿಗೆ ಬರೇ ಬೀಳುವು ಪಕ್ಕ ಎಂದು ತಿಳಿದು ಬಂದಿದೆ.

ಬಿಎಂಟಿಸಿ ವಜ್ರ ಬಸ್ ದರವೂ 20 ಕಿ.ಮೀ ಗಿಂತ ದೂರದ ಪ್ರಯಾಣದ ದರದಲ್ಲಿ ಏರಿಕೆ ಕಾಣಲಿದೆ. 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 45 ರೂ. ಇತ್ತು. ಗುರುವಾರದಿಂದ 20 ಕಿ.ಮೀ ವಯಸ್ಕರ ಪ್ರಯಾಣಕ್ಕೆ 50 ರೂ. ಆಗಿದೆ. 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ ಈ ಹಿಂದೆ 50 ರೂ. ಇದ್ದು, ಗುರುವಾರದಿಂದ 21 ಕಿ.ಮೀ ವಯಸ್ಕರ ಪ್ರಯಾಣಕ್ಕೆ 55 ರೂ. ಆಗಿದೆ. ಸದಾ ಬೆಳಗ್ಗೆ ಸಿಲಿಕಾನ್‌ ಸಿಟಿಯಲ್ಲಿ ಬಸ್‌ ಪ್ರಯಾಣಿಕರಿಗೆ ದಿಢೀರ್‌ ಶಾಕ್‌ ಆಗಿದಂತೂ ನಿಜ ಎಂದರೆ ತಪ್ಪಗಲಾರದು.