'ಕ್ರಾಂತಿ' ಹವಾ: ಒಟ್ಟು ಶೋ ಎಷ್ಟು? ಮಾರಾಟವಾದ ಟಿಕೆಟ್ ಎಷ್ಟು? ಕಲೆಕ್ಷನ್ ಆದ ಹಣವೆಷ್ಟು?

ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆ ಆಗಲು ಎರಡು ದಿನವಷ್ಟೆ ಬಾಕಿ ಉಳಿದಿದೆ. ಸಿನಿಮಾದ ಕ್ರೇಜ್ ದಿನ ದಿನಕ್ಕೂ ಹೆಚ್ಚಾಗುತ್ತಲೇ ಸಾಗುತ್ತಿದೆ.
ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ದಿನೇ ದಿನೇ ಟಿಕೆಟ್ ಬುಕಿಂಗ್, ಶೋ ಸಂಖ್ಯೆಗಳು ಹೆಚ್ಚುತ್ತಲೇ ಸಾಗಿದೆ.
ನಿನ್ನೆಯ ಲೆಕ್ಕದ ಪ್ರಕಾರ ಸಿನಿಮಾ ಸಿನಿಮಾ ಬಿಡುಗಡೆ ಆಗುವ ಮೊದಲೇ ಅಡ್ವಾನ್ಸ್ ಬುಕಿಂಗ್ನಿಂದಲೇ ಕೆಲವು ಕೋಟಿಗಳನ್ನು ಗಳಿಸಿಯಾಗಿದೆ. ಹಾಗಾದರೆ ಈವರೆಗೆ ಅಂದರೆ ಡಿಸೆಂಬರ್ 24 ರ ಬೆಳಿಗ್ಗಿನ ವರೆಗೆ 'ಕ್ರಾಂತಿ' ಸಿನಿಮಾಕ್ಕೆ ರಾಜ್ಯದಾದ್ಯಂತ ಸಿಕ್ಕ ಶೋಗಳೆಷ್ಟು, ಅಡ್ವಾನ್ಸ್ ಬುಕಿಂಗ್ ಆದ ಟಿಕೆಟ್ಗಳೆಷ್ಟು, ಗಳಿಸಿದ ಹಣವೆಷ್ಟು? ಮಾಹಿತಿ ಇಲ್ಲಿದೆ.
ಈವರೆಗೆ ಧಕ್ಕಿರುವ ಶೋಗಳ ಸಂಖ್ಯೆರಾಜ್ಯದಾದ್ಯಂತ ಈವರೆಗೆ 837 ಶೋಗಳನ್ನು 'ಕ್ರಾಂತಿ'ಗೆ ನೀಡಲಾಗಿದೆ. ಈ ಶೋಗಳ ಸಂಖ್ಯೆ ಇನ್ನೆರಡು ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಿ ಸಾವಿರ ದಾಟಿದರೂ ಆಶ್ಚರ್ಯವೇನಿಲ್ಲ. ಬೆಂಗಳೂರು, ಮೈಸೂರಿನಂಥಹಾ ಮೆಟ್ರೊ ಸಿಟಿಗಳಲ್ಲಿ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಅಬ್ಬರದ ನಡುವೆಯೂ 'ಕ್ರಾಂತಿ' ಸಿನಿಮಾ ದೊಡ್ಡ ಸಂಖ್ಯೆಯ ಶೋಗಳನ್ನು ತನ್ನದಾಗಿಸಿಕೊಂಡಿದೆ.
ಈವರೆಗೆ ಮಾರಾಟವಾಗಿರುವ ಟಿಕೆಟ್ಗಳೆಷ್ಟು?