ಕನ್ನಡ ಇಂಡಸ್ಟ್ರಿಯಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್ ವಿಚಾರ; ಶಿವಣ್ಣ ಪ್ರತಿಕ್ರಿಯೆ

ನಟಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡಬೇಕು ಎಂದೆಲ್ಲ ಮಾತುಗಳು ಕೇಳಿಬಂದಿದ್ದು. ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಪ್ರತಿಕ್ರಿಯೆ ಕೂಡ ನೀಡಿದ್ದರು. ಸದ್ಯ ಈ ವಿಚಾರವಾಗಿ ಶಿವರಾಜ್ ಕುಮಾರ್ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಸಿನಿಮಾಗಳು ಚೆನ್ನಾಗಿ ಓಡುತ್ತಿದ್ದೇಯಾ ಎಂದು ನೋಡುತ್ತೇನೆ ಹೊರತು, ಕಾಂಟ್ರವರ್ಸಿ ನೋಡುವುದಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ.