ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು : ಪಠಾಣ್ ಸಿನಿಮಾ ಬಹಿಷ್ಕರಿಸಿ : ಪ್ರಮೋದ್ ಮುತಾಲಿಕ್ ಕಿಡಿ

ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು : ಪಠಾಣ್ ಸಿನಿಮಾ ಬಹಿಷ್ಕರಿಸಿ : ಪ್ರಮೋದ್ ಮುತಾಲಿಕ್ ಕಿಡಿ

ಧಾರವಾಡ: ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಹೊಸ ಚಿತ್ರ ಪಠಾಣ್ ವಿವಾದ ಬೆನ್ನಲ್ಲೇ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು. ಅವರು ಹಿಂದೂಗಳಿಂದಲೇ ಹಿರೋ ಆಗಿದ್ದು. ಪಠಾಣ್ ಸಿನಿಮಾ ಬಹಿಷ್ಕಾರ ಆಗಬೇಕು ಎಂದು ಆರೋಪಿಸಿದ್ದಾರೆ.ಇತ್ತೀಚೆಗೆ ರಿಲೀಸ್ ಆದ ಚಿತ್ರದ 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ, ದೀಪಿಕಾ ಧರಿಸಿದ ಬಿಕಿನಿ ಡ್ರೆಸ್ ಬಣ್ಣದ ಬಗ್ಗೆಯೂ ವಿವಾದ ಬೆನ್ನಲ್ಲೇ ಧಾರವಾಡದಲ್ಲಿ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ ʻಪಠಾಣ್ ಸಿನಿಮಾ ಬಹಿಷ್ಕರಿಸಬೇಕೆಂದು ಆಕ್ರೋಶ ʼವ್ಯಕ್ತಪಡಿಸಿದ್ದಾರೆ.

'ಬೇಷರಂ ರಂಗ್ ಎಂಬ ಹಾಡಿನಲ್ಲಿ ಕೇಸರಿ ಬಣ್ಣದ ಬಟ್ಟೆ ಇದೆ. ಕೇಸರಿ ಬಣ್ಣ ಹಿಂದೂಗಳದ್ದು, ಆ ಬಣ್ಣದ ಬಟ್ಟೆಯನ್ನು ನಟಿ ದೀಪಿಕಾ ಅವರಿಗೆ ಬಿಕಿನಿಯಂತೆ ಬಳಸಲಾಗಿದೆ.

ಬೇಕಂತಲೇ ಅದನ್ನು ಮಾಡಿದ್ದಾರೆ. ಅಶ್ಲೀಲ, ಅಸಭ್ಯವಾಗಿ ಬಟ್ಟೆ ಹಾಕಿದ ಹಾಡು ಇದು. ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿದ್ದಾರೆ. ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು. ಅವರು ಹಿಂದೂಗಳಿಂದಲೇ ಹೀರೋ ಆಗಿದ್ದು. ಈಗಲೂ ಹಿಂದೂಗಳಿಗೆ ಅಪಚಾರ ಮಾಡಿದ್ದಾರೆ. ಪಠಾಣ್ ಸಿನಿಮಾ ಬಹಿಷ್ಕಾರ ಆಗಬೇಕು'' ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.