ತೆಂಗಿನಮರ ಬಿದ್ದು ಸ್ವಲ್ಪದರಲ್ಲೇ ತಪ್ಪಿದ ಅನಾಹುತ
ಸತತ ಎರಡಮೂರು ದಿನಗಳಿಂದ ನಿರಂಯರ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡದ ಬಾಗಲಕೋಟ ಪೆಟ್ರೋಲ್ ಹತ್ತಿರ ಮಹಿಷಿ ರಸ್ತೆಯಲ್ಲಿ ತೆಂಗಿನ ಮರವೊಂದು ನೆಲಕ್ಕೆ ಉರಳಿಬಿದ್ದಿದೆ. ತೆಂಗಿನ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಎರಡ್ಮೂರು ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿವೆ. ಇಂದು ಮುಂಜಾನೆಯಿಂದ ಬಿಟ್ಟೂಬಿಡದೇ ಮಳೆ ಸುರಿಯುತ್ತಿದ್ದು, ಅವಾಂತರವನ್ನೇ ಸೃಷ್ಟಿ ಮಾಡಿದೆ. ಸದ್ಯ ಮಹಿಷಿ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದು, ಪಾಲಿಕೆ ಹಾಗೂ ಹೆಸ್ಕಾಂ ಸಿಬ್ಬಂದಿ ತೆಂಗಿನ ಮರ ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ.