ಹುಬ್ಬಳ್ಳಿಯ ಜೈ ಭೀಮ ಯುವ ಸಂಘಟನೆಯ ವತಿಯಿಂದ ಪ್ರತಿಭಟನೆ

ಕಳೆದ ಮೂರು ವರ್ಷಗಳಿಂದ ಸಣ್ಣ ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಜೈ ಭೀಮ ಯುವ ಸಂಘಟನೆಯ ವತಿಯಿಂದ ಆದಷ್ಟು ಬೇಗ ಬಿಲ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನೆಡೆಸಿ ಮನವಿ ಸಲ್ಲಿಸಿದರು. ಲಾಕ್ ಡೌನ್ನಿಂದಾಗಿ ಬಹಳಷ್ಟು ಸಣ್ಣ ಸಣ್ಣ ಗುತ್ತಿಗೆದಾರರ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿದೆ. ಹೀಗಾಗಿ ಬಿಲ್ ಬಿಡುಗಡೆ ಮಾಡುವಂತೆ ಕಳೆದ 6 ತಿಂಗಳ ಹಿಂದೆ ಮನವಿಯನ್ನು ಮಾಡಿಕೊಂಡರು ಕೂಡಾ ಯಾವುದೇ ಪ್ರಯೋಜವಾಗಿಲ್ಲ. ಒಂದು ವೇಳೆ 10 ದಿನದೊಳಗೆ ಬಿಲ್ ಬಿಡುಗಡೆಯಾಗದಿದ್ದಲ್ಲಿ ಪಾಲಿಕೆಯ ಮುಂಭಾಗದಲ್ಲಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.