ವಾರ್ಡ್ ೬ರಿಂದ ದಿಲ್ಶ್ಯಾದ್ ಬೇಗಂ ನದಾಫ್ ಗೆದ್ದು ದಿಲ್ಖುಶ್ ಆಗ್ತಾರ | Dharwad |

ಧಾರವಾಡ

ವಾರ್ಡ್ ೬ರಿಂದ ದಿಲ್ಶ್ಯಾದ್ ಗೆದ್ದು ದಿಲ್ಖುಶ್ ಆಗ್ತಾರ

ವಾರ್ಡ್ ನಂಬರ್ ೬ರಿಂದ ಕಣಕ್ಕಿಳಿದ ದಿಲ್ಶ್ಯಾದ್ ಬೇಗಂ ನದಾಫ್
ವಾರ್ಡಿನ ಸರ್ವ ಜನಾಂಗದ ಅಭಿವೃದ್ಧಿಗೆ ಪಣ ತೊಟ್ಟ ನದಾಫ್ ಕುಟುಂಬದವರು.
ಯಾವಾಗಿದ್ದರೂ ಮನೆ ಬಾಗಿಲಿಗೆ ಬಂದವರ ನೋವಿಗೆ ಸ್ಪಂದಿಸುವ ದಿಲ್ಶ್ಯಾದ್ ಬೇಗಂ
೪೦ ವರ್ಷಗಳಿಂದ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡ  ದಿಲ್ಶ್ಯಾದ್ ಕುಟುಂಬದವರು
ದಿಲ್ಶ್ಯಾದ್ ಬೇಗಂ ನದಾಫ್ ಅವರು ಧಾರವಾಡ ಪಾಲಿಕೆ ಚುನಾವಣೆಯ ೬ನೇ ವಾರ್ಡಿನಿಂದ ಕಣಕ್ಕಿಳಿದಿರುವ ಮಹಿಳೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಗೆದ್ದಲ್ಲಿ ಸರ್ವ ಜನಾಂಗದ ಅಭಿವೃದ್ಧಿಗೆ ಬದ್ಧರಾಗಿ ಸುಂದರ ವಾರ್ಡ್ನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ. ನದಾಫ್ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದೆ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ವಾರ್ಡಿನ ಜನರ ಆರ್ಥಿಕ ಸಬಲೀಕರಣ ಮಾಡುವ ಉದ್ದೇಶವಿದೆ. ಈ ವಾರ್ಡಿನ ಪ್ರಮುಖ ಸಮಸ್ಯೆ ಎಂದರೆ ಮಳೆ ಬಂದರೆ ಎಲ್ಲ ಮನೆಗಳಲ್ಲಿ ನೀರು ನುಗ್ಗುತ್ತದೆ. ಹೀಗಾಗಿ ಆ ಸಮಸ್ಯೆ ಬಗೆಹರಿಸುವ ಉದ್ದೇಶ ಇವರದ್ದಾಗಿದೆ. ತಮ್ಮ ವಾರ್ಡ್ನ್ನು ಧೂಳು ಮುಕ್ತವಾಗಿಸುವ ಗುರಿ ದಿಲ್ಶ್ಯಾದ್ ಬೇಗಂ ಅವರದ್ದಾಗಿದೆ. ತಮ್ಮ ಮಕ್ಕಳ ಸಲಹೆ ಪಡೆದು ತಮ್ಮ ವಾರ್ಡಿಗೆ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂಬುದನ್ನು ಬೇಗಂ ಅವರು ಈಗಾಗಲೇ ಲೆಕ್ಕಾಚಾರ ಮಾಡಿಟ್ಟುಕೊಂಡಿದ್ದಾರೆ. ತಮ್ಮ ವಾರ್ಡಿನ ಪ್ರಮುಖ ಸಮಸ್ಯೆಗಳೇನು? ಯಾವೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದಾರೆ ಎಂಬುದನ್ನು ಸ್ವತಃ ದಿಲ್ಶ್ಯಾದ್ ಬೇಗಂ ಅವರೇ ಹೇಳ್ತಾರೆ ಕೇಳಿ. ವಾರ್ಡ್ ನಂಬರ್ ೬ ರ ವ್ಯಾಪ್ತಿಗೆ ಬರುವ ಧಾರವಾಡದ ಪ್ರಸಿದ್ಧ ಮುರುಘಾಮಠ ಹೊಂದಿದ್ದು. ಪ್ರತಿವರ್ಷ ಅದ್ಧೂರಿಯಿಂದ ಮುರುಘಾಮಠದ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಗೆಂದು ಬರುವ ಜನರ ಬಾಯಾರಿಕೆ ನೀಗಿಸಲು ಅಲ್ಲಲ್ಲಿ ಕುಡಿಯುವ ನೀರಿನ ಪಾಯಿಂಟ್ಗಳನ್ನು ಮಾಡುವ ಉದ್ದೇಶ ಇವರದ್ದಾಗಿದೆ. ಚುನಾವಣೆಗೆ ನಿಂತು ಗೆದ್ದು ಬಂದ ಮೇಲೆ ಜನ ಸೇವೆ ಮಾಡಿ ಬಡ ಜನರಿಗೆ ಸರ್ಕಾರದ ಸವಲತ್ತುಗಳು ಸಿಗುವಂತೆ ಮಾಡಬೇಕು ಎನ್ನುವ ಕನಸು ಹೊಂದಿದ್ದಾರೆ. ಹೀಗಾಗಿಯೇ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ. ಇದೇ ವಾರ್ಡಿನಲ್ಲಿ ಹುಟ್ಟಿ ಬೆಳೆದಿರುವ ದಿಲ್ಶ್ಯಾದ್ ಬೇಗಂ ಅವರಿಗೆ ವಾರ್ಡಿನ ಸಮಸ್ಯೆಗಳ ಸಂಪೂರ್ಣ ಅರಿವಿದೆ.
ನದಾಫ್ ಕುಟುಂಬದವರ ಬೆನ್ನಿಗೆ ನಿಂತ ವಾರ್ಡಿನ ಜನತೆ
ಚುನಾವಣೆಯಲ್ಲಿ ಗೆಲುವು ನಮ್ಮದೇ ಎನ್ನುತ್ತಿರುವ ಕೈ ಪಡೆ ಆತ್ಮವಿಶ್ವಾಸ
ವಾರ್ಡ್ ನಂಬರ್ ೬ ರಲ್ಲಿ ದಿಲ್ಶ್ಯಾದ್ ಬೇಗಂ ಅವರನ್ನು ಎಲ್ಲ ಕಾಂಗ್ರೆಸ್ ಕಾರ್ಯಕರ್ತ ಅಭಿಪ್ರಾಯದ ಮೇರೆಗೆ ಕಣಕ್ಕಿಳಿಸಲಾಗಿದೆ. ಹೀಗಾಗಿ ವಾರ್ಡಿನ ಎಲ್ಲ ಜನ ಅದರಲ್ಲೂ ಕಾಂಗ್ರೆಸ್ ಕಾರ್ಯಕರ್ತರು ದಿಲ್ಶ್ಯಾದ್ ಬೇಗಂ ಅವರ ಬೆನ್ನಿಗೆ ನಿಂತಿದ್ದಾರೆ. ಉತ್ತಮ ಸ್ಥಾನದಲ್ಲಿರುವ ನದಾಫ್ ಕುಟುಂಬ, ರಾಜಕೀಯ ಪ್ರವೇಶ ಮಾಡಿ ಬದಲಾವಣೆ ತರಬೇಕು ಎನ್ನುವ ಉದ್ದೇಶ ಹೊಂದಿದೆ.