ರೋಟರಿ ಕ್ಲಬ್ ಮಿಡ್‌ಟೌನ್‌ನಿಂದ ಶಿಕ್ಷಕರ ದಿನಾಚರಣೆ | Hubli |
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ವತಿಯಿಂದ ಗೋಕುಲ ರಸ್ತೆಯಲ್ಲಿರುವ ರೋಟರಿ ಸರಸ್ವತಿ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಆರಿಚಸಲಾಯಿತು. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ನ ಅಧ್ಯಕ್ಷರಾದ ಶ್ರೀ ಸುಶೀಲ್‌ಕುಮಾರ ಲದ್ದಾ ಮಾತನಾಡಿ ಶಿಕ್ಷಕರು ದೇವರು ಇದ್ದಂತೆ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ತಿದ್ದಿ ಇವರನ್ನು ಸರಿ ದಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಹಾಗೂ ಸರ್ಕಾರಿ ಶಾಲೆಯ 30 ಶಿಕ್ಷಕರಿಗೆ ಸನ್ಮಾನಿಸಿ ಗೌರವ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ರೋ. ಲಿಂಗರಾಜ ಪಾಟೀಲ, ರೋ. ಕೌಸ್ತುಭ ಸಂಶೀಕರ, ಸಂಜಯ ಕುನ್ನುತ್, ಗುಲಾಬ್ ಅಹಮ್ಮದ, ಸುಶೀಲ್‌ಕುಮಾರ ಬನ್ಸಾಲ್, ಇಮ್ಯನಲ್, ರವಿ ಮುಧೋಳ, ವಿಶ್ವನಾಥ ಅಂಗಡಿ, ಅಭಿಜಿತ್, ಚನ್ನು ಹೊಸಮನಿ, ಭುಜಲ್ ಮಾಲಗಟ್ಟಿ ಹಾಗೂ ಶಾಲಾ ಶಿಕ್ಷಕರು, ವಿದ್ಯಾಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.