ಕಾಂಗ್ರೆಸ್ ನಾಯಕರ ಗಮನ ಸೆಳೆದ ಟ್ರ್ಯಾಕ್ಟರ್ ಹೋರಾಟ; ತಮ್ಮ ಬೆನ್ನು ತಾವೇ ಚಪ್ಪರಸಿಕೊಂಡ್ರಾ ಕೋನರೆಡ್ಡಿ..?

ಕಾಂಗ್ರೆಸ್ ನಾಯಕರ ಗಮನ ಸೆಳೆದ ಟ್ರ್ಯಾಕ್ಟರ್ ಹೋರಾಟ; ತಮ್ಮ ಬೆನ್ನು ತಾವೇ ಚಪ್ಪರಸಿಕೊಂಡ್ರಾ ಕೋನರೆಡ್ಡಿ..?

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ರೈತರ ಪರವಾಗಿ  ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯಲು ಮತ್ತು ಬೆಳೆಹಾನಿ ಪರಿಹಾರಕ್ಕಾಗಿ, ವಿವಿಧ ಜನಪರ ಬೇಡಿಕೆಗಳ ಈಡೇರಿಸಲು ಕೋನರಡ್ಡಿಯವರು ವಿಶೇಷವಾಗಿ ಟ್ರ್ಯಾಕ್ಟರ್ ಹೋರಾಟ ನಡೆಸಿ ನವಲಗುಂದ ವಿಧಾಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ತೆರಳಿದ್ದು ಕಾಂಗ್ರೆಸ್ ನಾಯಕರ ಗಮನ ಸೆಳೆದಿದೆ ಎಂದು ತಮ್ಮಷ್ಟಕ್ಕೆ ತಾವೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ನ್ನು ಕೋನರೆಡ್ಡಿ ಮಾಡಿದ್ದು ಈಗ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಮಾಡಿದ ಸಂದರ್ಭದಲ್ಲಿ ಕೋನರಡ್ಡಿಯವರ ಹೋರಾಟಕ್ಕೆ ನಾಯಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇನ್ನು ಕೆಲವು ಯುವ ನಾಯಕರು ನಮ್ಮ ಕ್ಷೇತ್ರದಲ್ಲೂ ಇದೇ ರೀತಿ ಹೋರಾಟಗಳನ್ನು ಮಾಡಬೇಕಿದೆ ಎಂದು ಸಂತೋಷ ವ್ಯಕ್ತ ಪಡಿಸಿದ್ದಾರೆ. ಎನ್ನಲಾಗಿದೆ. ಒಂದು ಕಡೆ ಕೇವಲ ಈ ಹೋರಾಟ ರಾಜಕೀಯ ಪ್ರೇರಿತ ಎನ್ನಲಾಗಿದೆ. ಕಾಂಗ್ರೆಸ್ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗಯಾಗದೇ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವುದು ಇದು ಕೋನರೆಡ್ಡಿ ಅವರ ಹೋರಾಟ ಎನ್ನಲಾಗಿತ್ತು.