ಕಂಪನಿ ನಷ್ಟದಲ್ಲಿರೂ ಬತ್ತಿಲ್ಲ ಕಾರು ಖರೀದಿ ಕ್ರೇಜ್‌ : ಝೊಮ್ಯಾಟೋ ಕಥೆ-ವ್ಯಥೆ

ಕಂಪನಿ ನಷ್ಟದಲ್ಲಿರೂ ಬತ್ತಿಲ್ಲ ಕಾರು ಖರೀದಿ ಕ್ರೇಜ್‌ : ಝೊಮ್ಯಾಟೋ ಕಥೆ-ವ್ಯಥೆ

ಹೊಸದಿಲ್ಲಿ: ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆನ್‌ಲೈನ್ ಫುಡ್ ಡೆಲಿವರಿ ತಂತ್ರಾಂಶ ಝೊಮ್ಯಾಟೋ ಏಕೀಕೃತ ನಷ್ಟವು ವರ್ಷಕ್ಕೆ 346.6 ಕೋಟಿ ರೂ.ಗೆ ವಿಸ್ತರಿಸಿದೆ.

ಆಶ್ಚರ್ಯವೆಂದರೆ ಇದೇ ವೇಳೆ ಅದರ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು 4.3 ಕೋಟಿ ರೂ.

ಮೌಲ್ಯದ ಹೊಚ್ಚಹೊಸ ಫೆರಾರಿ ರೋಮಾ ಕಾರು ಖರೀದಿಸಿದ್ದಾರೆ. ಕಾರು ಝೊಮ್ಯಾಟೋ ಲೋಗೋದಂತೆಯೇ ಕೆಂಪು ಬಣ್ಣದಲ್ಲಿದೆ.

ಗೋಯಲ್ ಈಗಾಗಲೇ ಲಂಬೋರ್ಗಿನಿ ಉರಸ್ ಮತ್ತು ಪೋರ್ಷೆ 911 ಕ್ಯಾರೆರಾ ಎಸ್ ಕಾರನ್ನು ಹೊಂದಿದ್ದಾರೆ. ಗೋಯಲ್ ಅವರು ಭಾರತ್‌ಪೇ ಮಾಜಿ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್‌ ಅವರಂತೆಯೇ ಕಾರು ಖರೀದಿಯ ಕ್ರೇಜ್‌ ಹೊಂದಿದ್ದಾರೆ ಎಂದು ವರದಿಯಾಗಿದೆ.