ಸಂವಿಧಾನದ ಆಶಯಗಳನ್ನು ಪಾಲಿಸಿ, ಸಮ ಸಮಾಜಕ್ಕಾಗಿ ಶ್ರಮಿಸಬೇಕು: ವಿಶ್ವ ಮಾನವ ಹಕ್ಕು ಮಂಡಳಿ ತಜ್ಞೆ ಅಶ್ವಿನಿ ಕೆ.ಪಿ.

ಬೆಂಗಳೂರು, ಅ. 30: 'ಸಂವಿಧಾನವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಘನತೆಯಿಂದ ಬದುಕವ ಹಕ್ಕನ್ನು ನೀಡಿದ್ದು, ಸಂವಿಧಾನ ಆಶಯಗಳನ್ನು ಪ್ರತಿಯೊಬ್ಬರು ಪಾಲಿಸಿ ಸಮ ಸಮಾಜಕ್ಕಾಗಿ ಶ್ರಮಿಸಬೇಕು' ಎಂದು ವಿಶ್ವ ಮಾನವ ಹಕ್ಕು ಮಂಡಳಿ ತಜ್ಞೆ ಡಾ.ಅಶ್ವಿನಿ ಕೆ.ಪಿ. ಅವರು ಕರೆ ನೀಡಿದ್ದಾರೆ.
ಸೋಮವಾರ 'ಸಂವಾದ ಯುವ ಸಂಪನ್ಮೂಲ ಕೇಂದ್ರ' ಮತ್ತು ಯುವ ಮುನ್ನಡೆ ತಂಡದಿಂದ ಬಸವನಗುಡಿ ನ್ಯಾಷನಲ್ ಕಾಲೇಜ್‍ನಲ್ಲಿ ಏರ್ಪಡಿಸಿದ್ದ ಯುವಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಯುವಜನತೆ ದೇಶ ಅತಿದೊಡ್ಡ ಶಕ್ತಿಯಾಗಿದ್ದು, ಯುವಜನರಿಗೆ ಹಕ್ಕು ಕಲ್ಪಿಸುವುದರ ಮೂಲಕ ಯುವ ಶಕ್ತಿಯನ್ನು ಪ್ರೇರೆಪಿಸಬೇಕೆಂದು ಸಲಹೆ ನೀಡಿದರು.
ಧ್ವನಿ ಲೀಗಲ್ ಟ್ರಸ್ಟ್‍ನ ಮುಖ್ಯಸ್ಥೆ ಅಶ್ವಿನಿ ಓಬಳೇಶ್ ಮಾತನಾಡಿ, ಸಂವಿಧಾನ ಕೇವಲ ಮಾತಿನಲ್ಲಿ ಇರದೇ ಅದು ಬದುಕಿ ಭಾಗವಾಗಬೇಕು, ಸಂವಿಧಾನ ಆಶಯಗಳು ಜನ ಸಾಮಾನ್ಯರಿಗೆ ಧಕ್ಕಬೇಕು' ಎಂದು ತಿಳಿಸಿದರು.
ಬದುಕು ಕಾಲೇಜಿನ ಪ್ರಾಧ್ಯಾಪಕಿ ಇಶ್ರತ್ ನಿಸಾರ್, ದೇಶದಲ್ಲಿ ಬಹುಜನರಾಗಿರುವ ಯುವಜನರು ಪ್ರಸ್ತುತವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಅಸ್ತಿತ್ವಗಳನ್ನು ರೂಪಿಸುತ್ತಿರುವುದು ಬಹತ್ವ ಭಾರತದ ಕನಸ್ಸಿಗೆ ಭರವಸೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಆಂದೋಲನ ಭಾಗವಾಗಿ ಅಧ್ಯಯನ ನಡೆಸಿದ ಯುವಜನರ ಸಮಸ್ಯೆಗಳು, ಸ್ಮಶಾನ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗಳ ಕುರಿತು ವಾಸ್ತಾಂಶಗಳನ್ನು ಮಂಡಿಸಿದರು. ಈ ವೇಳೆ ಯುವ ಸಂಪನ್ಮೂಲ ಕೇಂದ್ರದ ದೇವರಾಜ್, ಸೋಮಶೇಖರ್, ಅಶ್ಚಿನಿ, ಸುಮಲತಾ, ಜ್ಯೋತಿ, ರಾಮಕ್ಕ ಆರ್. ಸೇರಿದಂತೆ ಇನ್ನಿತರರು ಹಾಜರಿದ್ದರು.