ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಭಿಮಾನಿಗಳು
ಹಾಸನ: ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು. ಜಿಲ್ಲೆಯ ಅರಕಲಗೂಡು ತಾ|ನ ಕಳ್ಳಿಮುದ್ದನಹಳ್ಳಿ ಗ್ರಾಮದ ಜಾಗ್ವಾರ್ ಬಾಯ್ಸ್‌ನ ಯುವಕರ ತಂಡ ಪಂಪದಿಂದ ಅಯ್ಯಪ್ಪನ ಸನ್ನಿಧಿಯವರೆಗೂ ಹೆಚ್.ಡಿ.ದೇವೇಗೌಡರ ಫೋಟೋ ಹಿಡಿದು ಪಾದಯಾತ್ರೆ ಮಾಡಿದ್ದಾರೆ. ಈ ವೇಳೆ ಕನ್ನಡನಾಡಿನ ಏಕೈಕ ಮಾಜಿ ಪ್ರಧಾನಿಗಳಾದ ದೇವೇಗೌಡ ಅವರಿಗೆ ಆರೋಗ್ಯ & ಆಯಸ್ಸು ನೀಡಲಿ ಎಂದು ಪ್ರಾರ್ಥಿಸಿದರು.