ಕಲಬುರಗಿ ಪಾಲಿಕೆ : ಮುಳುಗುವ ಹಡಗಿನ ಜೊತೆ 'ಹೊಂದಾಣಿಕೆ' ಮಾಡಿಕೊಂಡರೆ ಸಿಎಂ ಸ್ಥಾನಕ್ಕೆ 'ಕುತ್ತು' : ಎಚ್.ಡಿ.ರೇವಣ್ಣ

ಕಲಬುರಗಿ ಪಾಲಿಕೆ : ಮುಳುಗುವ ಹಡಗಿನ ಜೊತೆ 'ಹೊಂದಾಣಿಕೆ' ಮಾಡಿಕೊಂಡರೆ ಸಿಎಂ ಸ್ಥಾನಕ್ಕೆ 'ಕುತ್ತು' : ಎಚ್.ಡಿ.ರೇವಣ್ಣ

ಹಾಸನ : ಕಲಬುರಗಿ ಪಾಲಿಕೆಯಲ್ಲಿ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಕುರ್ಚಿಗೆ ಕುತ್ತು ಬರಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಬಹುದೆಂಬ ಸುದ್ದಿ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ, ಈ ಮೊದಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಮುಳುಗುವ ಹಡಗು ಎಂದು ಹೇಳಿದ್ದರು. ಹೀಗಿರುವಾಗ ಈಗ ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಸಿಎಂ ಸ್ಥಾನಕ್ಕೆ ತೊಂದರೆ ಉಂಟಾಗಲಿದೆ ಎಂದರು. ಅರುಣ್ ಸಿಂಗ್ ಹೇಳಿದ್ದನ್ನು ಸಿ.ಎಂ ಪಾಲಿಸಲಿ. ಹಡಗು ಮುಳುಗಿದರೆ ನಮ್ಮ ಬಳಿ ಸಬ್‌ ಮೆರಿನ್ ಇದೆ. ಪಕ್ಷ ಉಳಿಸಿಕೊಳ್ಳುವುದು ಗೊತ್ತು ಎಂದು ಕುಟುಕಿದರು.

ನೀವು ಮುಳುಗುವ ಹಡಗಿನ ಜೊತೆ ಯಾಕೆ ಬರುತ್ತೀರಾ ಎಂದು ಪ್ರಶ್ನಿಸಿದ ರೇವಣ್ಣ, ಮುಳುಗುವ ಹಡಗಿನ ಜೊತೆ ಸೇರಿ ನಿಮ್ಮ‌ ಸ್ಥಾನಕ್ಕೆ‌ ಕುತ್ತು ತಂದುಕೊಳ್ಳಬೇಡಿ' ಎಂದು ಮಾರ್ಮಿಕವಾಗಿ ನುಡಿದರು, ಅಲ್ಲದೇ, ಜೆಡಿಎಸ್ ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತದೆ ಎಂಬ ಬಗ್ಗೆ ಪಕ್ಷದ ವರಿಷ್ಟ ಎಚ್.ಡಿ.ದೇವಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು…