ಮೆಟ್ಟಿಲಿನಿಂದ ಬಿದ್ದು ಗಾಯಕ ಜುಬಿನ್ ನೌಟಿಯಾಲ್ ತಲೆ, ಕೈಗೆ ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

ಜನಪ್ರಿಯ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ ಗುರುವಾರ ಮುಂಜಾನೆ ಅಪಘಾತಕ್ಕೀಡಾಗಿದ್ದು, ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಸೆಂಬರ್ 1 ರಂದು ಕಟ್ಟಡದ ಮೆಟ್ಟಿಲಿನಿಂದ ಬಿದ್ದ ಪರಿಣಾಮ ಜುಬಿನ್ , ಅವರ ಮೊಣಕೈ ಮುರಿದಿದೆ. ಪಕ್ಕೆಲುಬು ಸೇರಿದಂತೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಅಪಘಾತ ನಡೆದ ಕೂಡಲೇ ಅವರನ್ನು ಆಸ್ಪತ್ರಗೆ ರವಾನಿಸಲಾಗಿದ್ದು, ಬಲಗೈಗೆ ಆಪರೇಷನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜುಬಿನ್ ನೌಟಿಯಾಲ್ ಅವರು ಲುಟ್ ಗಯೆ ಮತ್ತು ಹುಮ್ನಾವಾ ಮೇರೆಯಂತಹ ಚಾರ್ಟ್‌ಬಸ್ಟರ್‌ಗಳಿಗಾಗಿ ಖ್ಯಾತಿಯನ್ನು ಪಡೆದರು.
ಸಾಮ್ನೆ ಆಯೆ, ಮನಿಕೆ, ಮತ್ತು ಇತರ ಅವರ ಸೂಪರ್‌ಹಿಟ್ ಹಾಡುಗಳಿಗಾಗಿ ಅವರು ಸುದ್ದಿಯಲ್ಲಿದ್ದಾರೆ. ಜುಬಿನ್ ಭಾರತೀಯ ಸಂಗೀತ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದಾರೆ.
ಜುಬಿನ್ ರಾತನ್ ಲಂಬಿಯಾನ್ ಮತ್ತು ತುಜೆ ಕಿತ್ನೆ ಚಾಹ್ನೆ ಲಗೇ ಹಮ್, ತುಮ್ ಹಿ ಆನಾ, ಬೇವಾಫಾ ತೇರಾ ಮಾಸೂಮ್ ಚೆಹ್ರಾ ಮುಂತಾದ ಹಿಟ್ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ.