ಹರಿಪ್ರಸಾದ್‌ರನ್ನು ಪಿಂಪ್‌ ಎನ್ನಬಹುದೇ? -ಬಿ.ಸಿ.ಪಾಟೀಲ

ಹರಿಪ್ರಸಾದ್‌ರನ್ನು ಪಿಂಪ್‌ ಎನ್ನಬಹುದೇ? -ಬಿ.ಸಿ.ಪಾಟೀಲ

ಹಿರೇಕೆರೂರು (ಹಾವೇರಿ ಜಿಲ್ಲೆ): 'ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂ.ಎಲ್.ಸಿ ಆಗಿದ್ದಾರೆ. ಹಾಗಾದರೆ, ಹಿಂಬಾಗಿಲಿನಿಂದ ಬಂದ ಇವರನ್ನು 'ಪಿಂಪ್' ಎಂದು ಕರೆಯಬಹುದಾ' ಎಂದು ಸಚಿವ ಬಿ.ಸಿ.ಪಾಟೀಲ ಪ್ರಶ್ನಿಸಿದ್ದಾರೆ.

'ವೇಶ್ಯೆಯರ ರೀತಿ ಶಾಸಕ ಸ್ಥಾನ ಮಾರಿಕೊಂಡು 17 ಮಂದಿ ಬಿಜೆಪಿಗೆ ಹೋದರು' ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಅವರು ಮಂಗಳವಾರ ಇಲ್ಲಿ ಹೀಗೆ ತಿರುಗೇಟು ಕೊಟ್ಟಿದ್ದಾರೆ.

'ಆದರೆ ನಾವು ಹಾಗೆ ಕರೆಯಲು ಆಗಲ್ಲ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಹಾಗೆ ಮಾತನಾಡಿದರೆ ಜನ ಬೆನ್ನತ್ತಿ ಹೊಡೆಯುತ್ತಾರೆ. ಕಾಂಗ್ರೆಸ್‌ನವರು ಮಾಡಿದ ದ್ರೋಹದಿಂದ ನಾವು ರಾಜೀನಾಮೆ ಕೊಟ್ಟು ಬಂದೆವು. ಮತ್ತೆ ಜನಾದೇಶ ಪಡೆದೇ ಶಾಸಕರಾಗಿದ್ದೇವೆ. ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ' ಎಂದು ಅವರು ಸಮರ್ಥಿಸಿಕೊಂಡರು.

'ಇಷ್ಟು ವರ್ಷ ಕಾಂಗ್ರೆಸ್‌ನವರು ರೋಗಗ್ರಸ್ತ ಸರ್ಕಾರ ಮಾಡಿದರು. ಬಿಜೆಪಿ ಸರ್ಕಾರ ಅದನ್ನು ತೊಳೆಯುವ ಕೆಲಸ ಮಾಡಿದೆ. ಮತ್ತೆ ಕಾಂಗ್ರೆಸ್ ಸೇರುವ ಪ್ರಮೇಯ ಯಾರಿಗೂ ಇಲ್ಲ' ಎಂದರು.