ಶಾಲೆಗೆ ಬೀಗ ಜಡಿದು ಪ್ರವಾಸಕ್ಕೆ ತೆರಳಿದ ಶಿಕ್ಷಕರು..!

ಶಾಲೆಗೆ ಬೀಗ ಜಡಿದು ಪ್ರವಾಸಕ್ಕೆ ತೆರಳಿದ ಶಿಕ್ಷಕರು..!

ದಾವಣಗೆರೆ: ಶಾಲೆಗೆ ಬೀಗ ಜಡಿದು ಶಿಕ್ಷಕರು ಮೋಜು-ಮಸ್ತಿಗಾಗಿ ಪ್ರವಾಸಕ್ಕೆ ತೆರಳಿದ ಘಟನೆ ಜಿಲಲೆಯ ಜಗಳೂರು ತಾ|ನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ. ಕರ್ನಾಟಕ ಪಬ್ಲಿಕ್‌ ಶಾಲೆಯ ಶಿಕ್ಷಕರು ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೇ ನ.12ರಂದು ಮಕ್ಕಳಿಗೆ ರಜೆ ಘೋಷಿಸಿ ದಾಂಡೇಲಿ ಪ್ರವಾಸಕ್ಕೆ ಹೋಗಿದ್ದಾರೆ. ಈ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಷಯ ತಿಳಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರಣ ಕೇಳಿ ಎಲ್ಲಾ 14 ಜನ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎನ್ನಲಾಗಿದೆ.