ಕೊನೆಯದಾಗಿ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ನಟ ಶಾರುಖ್. ಝೀರೋ ಸಿನಿಮಾ ಫ್ಲಾಪ್ ಆಗಿ ಐದು ವರ್ಷಗಳ ನಂತರ ಶಾರುಖ್ ಹೀರೋ ಆಗಿ ಬಾಲಿವುಡ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. IMAX 2D ವರ್ಷನ್ಗಾಗಿ ಈ ಸಿನಿಮಾಗೆ ಕೆಲವು ಸ್ಥಳಗಳಲ್ಲಿ 2100 ರೂ.ಗಳಿಗೆ ಟಿಕೆಟ್ ಮಾರಾಟವಾಗುತ್ತಿವೆ. ಪಠಾಣ್ ಟಿಕೆಟ್‌ಗಳು 2 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುವುದರೊಂದಿಗೆ ದೆಹಲಿಯು ಅತಿ ಹೆಚ್ಚು ಬೆಲೆ ಏರಿಕೆ ಕಂಡಿದ್ದು, ಟಿಕೆಟ್ ದರಗಳು ಕೂಡ ಗಗನಕ್ಕೇರುತ್ತಿವೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಟಿಕೆಟ್‌ಗಳು PVR ಸೆಲೆಕ್ಟ್ ಸಿಟಿ ವಾಕ್‌ನಲ್ಲಿ 2100 ರೂ.ಗೆ ಮಾರಾಟವಾಗುತ್ತಿವೆ. ರೆಕ್ಲೈನರ್‌ಗಳ ಟಿಕೆಟ್‌ಗಳು ದುಬಾರಿಯಾಗಿವೆ. ಪಠಾಣ್ ಫಸ್ಟ್ ಡೇ 11pm ಶೋ ಈಗಾಗಲೇ ಬಹಳ ವೇಗವಾಗಿ ಭರ್ತಿಯಾಗುತ್ತಿವೆ. PVR Logix Noida ನಲ್ಲಿ, ಅವರ 10.55pm ಶೋಗಾಗಿ ಟಿಕೆಟ್ ದರಗಳು 1090 ರೂ.ಗೆ ಏರಿಕೆಯಾಗಿದ್ದು, 2ಡಿ ಟಿಕೆಟ್ ದರ 700 ರೂಪಾಯಿ ಇದೆ. ಮುಂಬೈನ ಪಿವಿಆರ್ ಐಕಾನ್, ಫೀನಿಕ್ಸ್ ಪಲ್ಲಾಡಿಯಮ್, ಲೋವರ್ ಪರೇಲ್‌ನಲ್ಲಿ, ಪಠಾಣ್ ರಾತ್ರಿ 11 ಗಂಟೆಯ ಪ್ರದರ್ಶನಕ್ಕೆ ಟಿಕೆಟ್ ಬೆಲೆ ರೂ 1450 ಇದೆ. ಟಿಕೆಟ್ ದರಗಳು ರೂ 300 ರಿಂದ ಪ್ರಾರಂಭವಾಗುತ್ತವೆ. ಮುಂಬೈನಲ್ಲಿ 2D ಟಿಕೆಟ್ 850 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಸೌತ್ ಸಿಟಿಯ INOX ನಲ್ಲಿ ರಾತ್ರಿ ಪ್ರದರ್ಶನಕ್ಕೆ 650 ರೂ ಟಿಕೆಟ್ ನಿಗದಿಯಾಗಿದೆ. ಆದರೆ IMAX 2D ಆವೃತ್ತಿಗಳಿಗಾಗಿ ಇತರ ಸ್ಥಳಗಳಲ್ಲಿ ಪ್ರೀ ಬುಕ್ಕಿಂಗ್ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಬೆಂಗಳೂರಿನಲ್ಲಿ, ಪಠಾಣ್‌ಗೆ ಅತ್ಯಧಿಕ ಟಿಕೆಟ್ ದರ ರೂ. 900 ಫಿಕ್ಸ್ ಆಗಿದೆ. ನಾರ್ಮನ್ 2ಡಿ ವರ್ಷನ್ ಬೆಲೆ ರೂ. 230 ರಿಂದ ರೂ. 800. ಇರಲಿದೆ. ಪುಣೆಯಲ್ಲಿ ಟಿಕೆಟ್ ದರ 650 ರೂ.ಗೆ ಏರಿಕೆಯಾಗಿದ್ದು, ಹೈದರಾಬಾದ್‌ನಲ್ಲಿ ಟಿಕೆಟ್ ದರ 295 ರೂ.ಗೆ ತಲುಪಿದೆ. ಆದರೂ ಈ ಶೋಗಳಲ್ಲಿ ಹೆಚ್ಚಿನವುಗಳ ಟಿಕೆಟ್ ಭರ್ಜರಿಯಾಗಿ ಸೇಲ್ ಆಗುತ್ತಿವೆ.