ಪಶ್ಚಿಮ ನೇಪಾಳದಲ್ಲಿ 5.9 ತೀವ್ರತೆಯ ಭೂಕಂಪ: ಓರ್ವ ಮಹಿಳೆ ಸಾವು, ಹಲವು ಮನೆಗಳಿಗೆ ಹಾನಿ

ಪಶ್ಚಿಮ ನೇಪಾಳದಲ್ಲಿ 5.9 ತೀವ್ರತೆಯ ಭೂಕಂಪ: ಓರ್ವ ಮಹಿಳೆ ಸಾವು, ಹಲವು ಮನೆಗಳಿಗೆ ಹಾನಿ

ಶ್ಚಿಮ ನೇಪಾಳ: ಪಶ್ಚಿಮ ನೇಪಾಳದಲ್ಲಿ ಮಂಗಳವಾರ ಮಧ್ಯಾಹ್ನ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ, ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಸುದುರ್ಪಶ್ಚಿಮ್ ಪ್ರಾಂತ್ಯದ ಬಾಜುರಾ ಜಿಲ್ಲೆಯ ಮೇಲಾ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ 2:43 (ಸ್ಥಳೀಯ ಕಾಲಮಾನ) ಕ್ಕೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪ ಮಾಪನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಲೋಕ ಬಿಜಯ ಅಧಿಕಾರಿ ತಿಳಿಸಿದ್ದಾರೆ.

ಬಾಜುರಾ ಜಿಲ್ಲೆಯ ಸಮೀಪದ ಕಾಡಿನಲ್ಲಿ ಹುಲ್ಲು ಕೀಳುವಾಗ ಬಂಡೆಯೊಂದು ಬಿದ್ದು 35 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೂಕಂಪದಿಂದ ಉಂಟಾದ ಭೂಕುಸಿತದಿಂದಾಗಿ 40 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ, ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.