ದೀಪಾವಳಿ ಹಬ್ಬದಂದು 'ವಿದ್ಯುತ್ ವ್ಯತ್ಯಯ'ವಾಗದಂತೆ ಎಚ್ಚರಿಕೆ ವಹಿಸಿ - ಬೆಸ್ಕಾಂ ಎಂಡಿ ಸೂಚನೆ

ದೀಪಾವಳಿ ಹಬ್ಬದಂದು 'ವಿದ್ಯುತ್ ವ್ಯತ್ಯಯ'ವಾಗದಂತೆ ಎಚ್ಚರಿಕೆ ವಹಿಸಿ - ಬೆಸ್ಕಾಂ ಎಂಡಿ ಸೂಚನೆ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಸಂದರ್ಭದಲ್ಲಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಯಾವುದೇ ರೀತಿಯ ವಿದ್ಯುತ್ ವ್ಯತ್ಯಯವಾಗದಂತೆ ಗಮನ ಹರಿಸಲು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ) ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ನಗರ ಸಭೆ, ನಗರ ಪಾಲಿಕೆ ಹಾಗು ಮಹಾನಗರ ಪಾಲಿಕೆ ವ್ಯಾಪ್ತಿಯ ಗ್ರಾಹಕರಿಗೆ ಯಾವುದೇ ರೀತಿಯ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ ಎಂಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೆ ದೀಪಾವಳಿ ಹಬ್ಬ ಮುಗಿಯುವವರೆಗೂ ಯಾವುದೇ ವಿದ್ಯುತ್‌ ಮಾರ್ಗಗಳ ದುರಸ್ತಿ, ಜೋಡಣೆ ಹಾಗು ಮಾರ್ಗ ಮುಕ್ತತೆ (ಲೈನ್‌ ಕ್ಲಿಯರೆನ್ಸ್‌) ಕಾರ್ಯ ಕೈಗೆತ್ತಿಕೊಳ್ಳದಂತೆ ಅಧಿಕಾರಿಗಳಿಗೆ ಬೆಸ್ಕಾಂ ಎಂಡಿ ಸೂಚನೆ ನೀಡಿದ್ದಾರೆ.ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಯ ಕಂಡುಬಂದಲ್ಲಿ ತಕ್ಷಣವೇ ಅವುಗಳನ್ನು ಸರಿಪಡಿಸಿ ಕ್ರಮ ಜರುಗಿಸಲು ನಿರ್ದೇಶನ ನೀಡಿದ್ದಾರೆ.