ವಿನಯ ಬರ್ತಡೆ ಅಂಗವಾಗಿ ರಕ್ತದಾನ ಶಿಬಿರ

ಮಾಜಿ ಗಣಿ ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರ 53ನೇ ಹುಟ್ಟಿದ ಹಬ್ಬವನ್ನು ಅವರು ಅನುಪಸ್ಥಿತಿಯಲ್ಲಿ ವಿನಯ ಅಭಿಮಾನಿಗಳು ಧಾರವಾಡದಲ್ಲಿ ರಕ್ತದಾನ ಶಿಬಿರ ನಡೆಸುವ ಮೂಲಕ ಜನ್ಮದಿನ ಆಚರಣೆ ನಡೆಸಿದ್ದಾರೆ. ನಗರದ ಗಾಂಧಿಚೌಕನ ಜಿಮ್ ಒಂದರಲ್ಲಿ ವಿನಯ ಅಭಿಮಾನಿ ಬಸವರಾಜ ಜಾಧವ ನೇತ್ರತ್ವದಲ್ಲಿ ರಕ್ತದಾನ ಶಿಬಿರ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿದ್ರು. ಅನಂತರ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ನಮ್ಮ ಅಣ್ಣಾ ವಿನಯ ಕುಲಕರ್ಣಿ ಸಾಹೇಬ್ರದ ಬರ್ತಡೆ ಆಚರಿಸುತ್ತಾ ಬಂದಿದ್ದವೆ. ಅದ್ರಂತೆ ಈ ವರ್ಷ ಕೂಡಾ ಆಚರಣೆ ನಡೆಸಿದ್ದವಿ.ಅವರು ಧಾರವಾಡ ಜಿಲ್ಲೆಯಲ್ಲಿ ಇಲ್ಲಾ ಅಷ್ಟೇ ಬಿಟ್ಟರೇ ನಾವು ಮಾಡುವ ಕೆಲಸ ವಿಡಿಯೋ ಕಾಲ್ ಮುಖಾಂತರ ಮಾಹಿತಿ ನೀಡಿದ್ದವೆ. ಅವರು ನಮ್ಮಗೆ ಧನ್ಯವಾದ ತಿಳಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು...