ಅಜ್ಜಂಪುರ ಬಳಿ ಭೀಕರ ಕಾರು ಅಪಘಾತ : ಭಾವಿ ಮದುಮಗ ಸೇರಿ ಇಬ್ಬರು ಸಾವು

ಅಜ್ಜಂಪುರ ಬಳಿ ಭೀಕರ ಕಾರು ಅಪಘಾತ : ಭಾವಿ ಮದುಮಗ ಸೇರಿ ಇಬ್ಬರು ಸಾವು

ಚಿಕ್ಕಮಗಳೂರು : ಭೀಕರ ರಸ್ತೆ ಅಪಘಾತದಲ್ಲಿ ಭಾವಿ ಮದುಮಗ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಜ್ಜಂಪುರ ಸಮೀಪದ ಮಾಕನಹಳ್ಳಿಯಲ್ಲಿ ಸಂಭವಿಸಿದೆ.

ಕಿರಣ್ (29) ಹಾಗೂ ನಾಗರಾಜ್ (40) ಮೃತಪಟ್ಟಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಕಿರಣ್ ಶಿವನಿಯ ಮೆಸ್ಕಾಂ ನಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.ವಿಧಿ ಅಟ್ಟಹಾಸ ಇಂದರೆ ಇದೇ ಇರಬೇಕು ನೋಡಿ..ಕಿರಣ್ ಗೆ ಫೆ.8 ರಂದು ಮದುವೆ ಫಿಕ್ಸ್ ಆಗಿತ್ತು. ಮದುವೆ ಸಂಭ್ರಮದಲ್ಲಿದ್ದ ಕಿರಣ್ ಇದೀಗ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇನ್ನೂ, ನಾಗರಾಜ್ ಕಿರಣ್ ಸ್ನೇಹಿತರಾಗಿದ್ದು, ಇಬ್ಬರು ಜೊತೆಯಾಗಿ ಹೋಗುತ್ತಿದ್ದಾಗ ಕಾರು ನಿಯಂತ್ರಣಕ್ಕೆ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.