ಕೆಯುಡಿ ವಿರುದ್ಧ ಬಸವರಾಜ ದೇವರು ಪ್ರತಿಭಟನೆ

ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯನ್ನು ಕರ್ತವ್ಯದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ನಗರದ ಕವಿವಿ ಕುಲಪತಿ ಕಚೇರಿ ಎದುರು ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ಕುರುಬ ಸಮುದಾಯದ ಮುಖಂಡರು ಕೆಯುಡಿಯ ಸಿಂಡಿಕೇಟ್ ಸದಸ್ಯರು ಹಾಗೂ ಕುಲಪತಿ ಕೆ.ಬಿ ಗುಡಸಿ ವಿರುದ್ಧ ಆಕ್ರೋಶ ಹೊರಹಾಕಿದರು. ಇಂಗ್ಲೀಷ್ ವಿಭಾಗದ ಸಹ ಪ್ರಾದ್ಯಾಪಕಿ ಶ್ರೀದೇವಿ ಅವರಿಗೆ ಅನ್ಯಾಯವಗಿದೆ. ಶ್ರೀದೇವಿ ಅವರನ್ನು ಯುಜಿಸಿ ನಿಯಮಗಳ ಆಧಾರದ ಮೇಲೆ‌ ನೇಮಿಸಲಾಗಿತ್ತು. ಇದೀಗ ಅವರನ್ನು ಆಡಳಿತ ಮಂಡಳಿ ದಿಢೀರ್ ಕರ್ತವ್ಯದಿಂದ ತೆಗೆದು ಹಾಕಿದೆ. 11-09-2021 ರ ಸಭೆಯಲ್ಲಿ ಕರ್ತವ್ಯ ತೇರ್ಗಡೆ ವಿಚಾರಕ್ಕೆ ಠರಾವು ಪಾಸ್ ಮಾಡಲಾಗಿದೆ. ಅದನ್ನು ಏಕಾಏಕಿ ಬದಲಾವಣೆ ಮಾಡಿ ಕೆಲಸ ಕಳೆಯುವ ಕೆಲಸ ಆಗುತ್ತಿದೆ. ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರ ನಿರ್ಧಾರದಿಂದಾಗಿ ಮಹಿಳೆ ಮೋಸ ಮಾಡುತ್ತಿದ್ದು, ಕೂಡಲೇ ವಿವಿ 11 ರಂದು ಮಾಡಿರುವ ಠರಾವು ಪಾಲಿಸಲು ಬಸವರಾಜ್ ದೇವರು ಒತ್ತಾಯಿಸಿದರು. ಇನ್ನು ಇದೇ ವೇಳೆ ಉಪಕುಲಪತಿಗಳ ವಿರುದ್ದ ಮಾತಿನ ಚಕಮಕಿ‌ ನಡೆಸಿದ ಬಸವರಾಜ ದೇವರು, ಆ ಹೆಣ್ಣು ಮಗಳಿಗೆ ಅನ್ಯಾಯ ವಾದರೆ ಮುಂದೆ ಉಗ್ರ ಹೋರಾಟವನ್ನು ಮಾಡೋದಾಗಿ ಎಚ್ಚರಿಕೆ ನೀಡಿದ್ರು