ಬೆಂಗಳೂರಿನಲ್ಲಿ ಕೋವಿಡ್‌ ನಿಯಮ ಉಲ್ಲಂಘನೆ; ಕೆಆರ್‌ ಮಾರ್ಕೆಟ್‌ ನಲ್ಲಿ ಮಾಸ್ಕ್ ಹಾಕದೆ ಜನರ ಓಡಾಟ

ಬೆಂಗಳೂರಿನಲ್ಲಿ ಕೋವಿಡ್‌ ನಿಯಮ ಉಲ್ಲಂಘನೆ; ಕೆಆರ್‌ ಮಾರ್ಕೆಟ್‌ ನಲ್ಲಿ ಮಾಸ್ಕ್ ಹಾಕದೆ ಜನರ ಓಡಾಟ

ಬೆಂಗಳೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್​.7 ಹೆಚ್ಚಾಗುತ್ತಿದ್ದು, ಕರ್ನಾಟಕದಲ್ಲಿ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕಾಗಿ ಫುಲ್‌ ಅಲರ್ಟ್‌ ಆಗಿದೆ.

ಈಗಾಗಲೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೊರೊನಾ ನಿಯಮ ಜಾರಿಗೆ ತಂದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಜನರಿಗೆ ಸಮಸ್ಯೆಯಾಗದಂತೆ ಕೆಲ ಸರಳ ರೂಲ್ಸ್​ಗಳನ್ನ ಸರ್ಕಾರ ಹೊರಡಿಸಿದೆ. ಶಾಲೆ, ಕಾಲೇಜುಗಳಲ್ಲಿ, ಥಿಯೇಟರ್, ಮಾಲ್, ಮಾರ್ಕೆಟ್​ನಲ್ಲಿ ಮಾಸ್ಕ ಕಡ್ಡಾಯ ಮಾಡಲಾಗಿದೆ. ಆದ್ರೆ ರಾಜ್ಯದಲ್ಲಿ ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ.

ಬೆಂಗಳೂರಿನ ಕೆಆರ್​ ಮಾರ್ಕೆಟ್​ನಲ್ಲಿ ಮಾಸ್ಕ್ ಇಲ್ಲದೇ ಜನ ಓಡಾಡುತ್ತಿದ್ದಾರೆ. ಮಾಸ್ಕ್​ ಇಲ್ಲದೆಯೇ ವ್ಯಾಪಾರ ವಹಿವಾಟಿನಲ್ಲಿ ಮುಳುಗಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದಾರೆ. ಬಹುತೇಕ ಮಂದಿ ಮಾಸ್ಕ್‌ ಇಲ್ಲದೆ ಓಡಾಟ ನಡೆಸುತ್ತಿದ್ದಾರೆ
ಬೆಂಗಳೂರು ನಗರದಲ್ಲಿ ಕೊವಿಡ್ ಗೈಡ್​ಲೈನ್ಸ್ ಪಾಲನೆಯಾಗ್ತಿಲ್ಲ. ಬಿಎಂಟಿಸಿ ಬಸ್​ ಚಾಲಕ ಹಾಗೂ ನಿರ್ವಾಹಕರೇ ಮಾಸ್ಕ್ ಧರಿಸುತ್ತಿಲ್ಲ. ಈಗಾಗಲೇ ಬಿಎಂಟಿಸಿ ಆದೇಶ ಹೊರಡಿಸಿದೆ. ನಿತ್ಯ ಬಿಎಂಟಿಸಿ ಬಸ್​ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಪ್ರಯಾಣಿಕರು ಮಾಸ್ಕ್ ಹಾಕಿದ್ರು ಬಿಎಂಟಿಸಿ ಸಿಬ್ಬಂದಿ ಹಾಕ್ತಿಲ್ಲ.