ರಾಯಚೂರಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಆರ್ಟಿಪಿಎಸ್ನ 4 ಘಟಕಗಳು ಬಂದ್ : ಜನರಿಗೆ ಪವರ್ ಕಟ್ ಆತಂಕ

ರಾಯಚೂರು: ರಾಯಚೂರಿನಲ್ಲಿ ತಾಂತ್ರಿಕ ದೋಷದಿಂದ ಆರ್ಟಿಪಿಎಸ್ನ 4 ಘಟಕಗಳು ಬಂದ್ ಆಗಿವೆ.ಒಟ್ಟು 8 ವಿದ್ಯುತ್ ಉತ್ಪಾದನಾ ಘಟಕ ಹೊಂದಿರುವ ಆರ್ಟಿಪಿಎಸ್ ಕೇಂದ್ರದಲ್ಲಿ ಈಗ 4 ಘಟಕಗಳು ಬಂದ್ ಆಗಿವೆ.
ಇದರಿಂದ 1.720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಆರ್ಟಿಪಿಎಸ್ ನಲ್ಲಿ ಕೇವಲ 560 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.ಹೀಗಾಗಿ ಪವರ್ ಕಟ್ ಆಗುವ ಆತಂಕ ಶುರುವಾಗಿದೆ.
ಇದರಿಂದ 210 ಮೆಗಾ ವಾಟ್ ಸಾಮರ್ಥ್ಯದ 5ನೇ ವಿದ್ಯುತ್ ಘಟಕ ಮತ್ತು 6ನೇ ಘಟಕದ ವಿದ್ಯುತ್ ಉತ್ಪಾದನೆಯ ಹಾರುಬೂದಿ ಹೊರ ಹಾಕುವ ಪೈಪ್ ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕಳೆದ 6 ತಿಂಗಳಿಂದ 1ನೇ ಘಟಕ ಸ್ಥಗಿತಗೊಳಿಸಲಾಗಿದೆ. ಈ ಘಟಕವನ್ನು ಸಂಪೂರ್ಣವಾಗಿ ಮರು ನಿರ್ಮಾಣಗೊಳಿಸುವ ಸಾಧ್ಯತೆ ಇರುವುದರಿಂದ ವಿದ್ಯುತ್ ಉತ್ಪಾದನೆ ಕೂಡ ನಿಲ್ಲಿಸಲಾಗಿದೆ.
BIGG NEWS: ರಾಯಚೂರಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಆರ್ಟಿಪಿಎಸ್ನ 4 ಘಟಕಗಳು ಬಂದ್ : ಜನರಿಗೆ ಪವರ್ ಕಟ್ ಆತಂಕ