HAL' ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ವಂಚನೆ : ಏಳು ಮಂದಿ ಅರೆಸ್ಟ್

HAL' ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ವಂಚನೆ : ಏಳು ಮಂದಿ ಅರೆಸ್ಟ್

ಬೆಂಗಳೂರು : ಬೆಂಗಳೂರಿನಲ್ಲಿ ಬೃಹತ್ ಮೋಸದ ಜಾಲ ಬೆಳಕಿಗೆ ಬಂದಿದ್ದು, ಹೆಚ್‌ಎಎಲ್ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗುತ್ತಿದ್ದ 7 ಜನ ಆರೋಪಿಗಳನ್ನು ಹೆಚ್‌ಎಎಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಸೈಯದ್ ಮುನಾವರ್ ಸಾಬ್ರಿ, ಪ್ರತಾಪ್ ಸೇರಿ ಏಳು ಜನರನ್ನು ಬಂಧಿಸಿದ್ದಾರೆ.ಆರೋಪಿಗಳು ಹೆಚ್‌ಎಎಲ್ನ ಬರೋಬ್ಬರಿ 833 ಎಕರೆ ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದರು.

ಹೆಚ್‌ಎಎಲ್ ನ ಲೆಟರ್ ಹೆಡ್ ಮತ್ತು ಅಧಿಕಾರಿಗಳ ಸಹಿಯನ್ನು ನಕಲು ಮಾಡಿಕೊಂಡ ಅರೋಪಿಗಳು ವಂಚನೆ ಎಸಗಿ ಮೂರನೇ ವ್ಯಕ್ತಿಗಳಿಂದ ಒಂದು ಕೋಟಿ ಪಡೆದಿದ್ದರು. ಹೆಚ್‌ಎಎಲ್ ಅಧಿಕಾರಿ ಕೊಟ್ಟ ದೂರಿನ ಮೇರೆಗೆ ಹೆಚ್‌ಎಎಲ್ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.