ನಾಳೆ ಹುಟ್ಟುಹಬ್ಬ ಆಚರಿಸಬೇಕಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು

ನಾಳೆ ಹುಟ್ಟುಹಬ್ಬ ಆಚರಿಸಬೇಕಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು

ಸಾಗರ: ತಾಲೂಕಿನ ವರದಹಳ್ಳಿ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ  ಅರುಣ್ (24) ಮೃತಪಟ್ಟಿದ್ದು, ಆತನ ಸ್ನೇಹಿತ ಅಜೇಯ ಕಾಲು ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಫೆ.10ರಂದು ಜನ್ಮದಿನ ಆಚರಿಸಬೇಕಾಗಿದ್ದ ಅರುಣ್ ಕರ್ಕಿಕೊಪ್ಪದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ.

ಜಾತ್ರೆಯ ಹಿನ್ನೆಲೆಯಲ್ಲಿ ಸ್ನೇಹಿತರ ಮನೆಗೆ ಅಜೇಯ ಜತೆ ದ್ವಿಚಕ್ರ ವಾಹನದಲ್ಲಿ ಊಟಕ್ಕೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಓಮಿನಿ ಕಾರು ಗುದ್ದಿದೆ. ಪರಿಣಾಮ ಸ್ಥಳದಲ್ಲೇ ಅರುಣ್ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಹಿಂಬದಿಯಲ್ಲಿದ್ದ ಅಜೇಯಗೆ ಕಾಲು ಮುರಿದಿದ್ದು, ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.