ಪ್ರತಿಷ್ಠಿತ ಬ್ಯಾಂಕ್ನಲ್ಲಿಟ್ಟಿದ್ದ ಚಿನ್ನ ಮಾಯ..'ಎಲ್ಲಿ ಸ್ವಾಮಿ ಆಭರಣ..? ಎಂದ ದಂಪತಿಗೆ ಮ್ಯಾನೇಜರ್ ಶಾಕಿಂಗ್ ಉತ್ತರ..

ಕಳ್ಳಕಾಕರ ಭಯದಿಂದ ಜನಸಾಮಾನ್ಯರು ತಮ್ಮ ಹಣ ಹಾಗೂ ಚಿನ್ನ ಸುರಕ್ಷಿತವಾಗಿರುತ್ತೆ ಅಂತ ಬ್ಯಾಂಕ್ನಲ್ಲಿಡುತ್ತಾರೆ. ಆದ್ರೆ ಆ ಬ್ಯಾಂಕ್ನಲ್ಲಿಟ್ಟ ಹಣವೇ ಮಂಗಮಾಯವಾದ್ರೆ.. ಇಂಥ ಶಾಕಿಂಗ್ ಸುದ್ದಿಯಿಂದ ಕುಟುಂಬವೊಂದು ಕಂಗಾಲಾಗಿದೆ.
ಬ್ಯಾಂಕ್ ಅಂದ್ರೆ ಜನಸಾಮಾನ್ಯರ ದುಡ್ಡಿನ ಹಾಗೂ ಚಿನ್ನದ ಸೆಕ್ಯೂರಿಟಿ ಗಾರ್ಡ್.
ಸೇಫ್ ಆಗಿರಲಿ ಅಂತ ಇಟ್ಟ ಚಿನ್ನನೇ ಲಾಕರ್ನಿಂದ ಮಂಗ ಮಾಯ
ಇಲ್ಲಿ ಹೀಗೆ ಲಾಕರ್ ಕೀ ತೋರಿಸ್ತಾ ಆಕಾಶನೇ ತಲೆ ಮೇಲೆ ಬಿದ್ದಂತಿದಾರಲ್ಲ ಇವ್ರ ಹೆಸರು ಕೃಷ್ಣಕುಮಾರ್, ಬೆಂಗಳೂರಿನ ಯಲಹಂಕದವರು. ಇವರೇ ನೋಡಿ ತಮ್ಮ ಚಿನ್ನವನ್ನು ಕಳಕೊಂಡವರು. ಇವರು ವಿದೇಶಕ್ಕೆ ಹೋಗುವಾಗ ಸೇಫ್ ಆಗಿರಲಿ ಅಂತ ಬ್ಯಾಂಕ್ನ ಲಾಕರ್ನಲ್ಲಿಟ್ಟ ಚಿನ್ನವೇ ಮಂಗಮಾಯವಾಗಿದೆ. ಯಲಹಂಕದ ಕರ್ನಾಟಕ ಬ್ಯಾಂಕ್ನ ಲಾಕರ್ಗೆ ಖದೀಮರು ಕನ್ನ ಹಾಕಿ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೇ ಎಸ್ಕೇಪ್ ಮಾಡಿದ್ದಾರೆ.
ಲಾಕರ್ನಲ್ಲಿಟ್ಟ ಚಿನ್ನ ಮಾಯ..
ಒಟ್ಟಾರೆ ತಾವು ದುಡಿದು ಸಂಪಾದಿಸಿದ ದುಡ್ಡನ್ನ ಸುರಕ್ಷಿತವಾಗಿರುತ್ತೆ ಅಂತ ಬ್ಯಾಂಕ್ನಲ್ಲಿಟ್ರೆ ಅಲ್ಲಿಂದಲೇ ಹಣ ಮಾಯವಾಗಿದೆ. ಈ ಬಗ್ಗೆ ಕೇಳಿದ್ರೆ ಬ್ಯಾಂಕ್ ಸಿಬ್ಬಂದಿ ಉಡಾಫೆ ಉತ್ತರ ಕೊಡ್ತಿದ್ದಾರೆ. ಸದ್ಯ ಪೊಲೀಸರೇ ಚಿನ್ನ ಕಳೆದುಕೊಂಡು ಕಂಗಾಲಾಗಿರುವವರಿಗೆ ನ್ಯಾಯ ಕೊಡಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ