ಮತ್ತೊಂದು ಬೆಚ್ಚಿ ಬೀಳಿಸುವ ಪ್ರಕರಣ; ಸೂಟ್ ಕೇಸ್ ನಲ್ಲಿ ಯುವತಿ ಶವ ಪತ್ತೆ

ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ಬೆಳಗ್ಗೆ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ದೇಹದ ಮೇಲೆ ಹಲವು ಗಾಯದ ಗುರುತುಗಳಿವೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದೆ. ವಯಸ್ಸು ಅಂದಾಜು 22 ವರ್ಷ. ಈ ಕೊಲೆ ಬೇರೆ ಕಡೆ ನಡೆದಿದ್ದು ನಂತರ ಮೃತದೇಹವನ್ನು ತಂದು ಇಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಯುವತಿಯ ಗುರುತು ಪತ್ತೆಯಾಗಿಲ್ಲ.