ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರ ಪ್ರಮುಖವಾಗಿದೆ
ಪುರುಷರ ಎಲ್ಲ ಕಾರ್ಯಗಳಿಗೆ ಮಹಿಳೆಯೇ ಸ್ಪೂರ್ತಿ ಎಂದು .ಸಾವಯವ ಕೃಷಿ ಪ್ರಶಸ್ತಿ ಪುರಸ್ಕೃತ ಜಯದೇವ ಅಗಡಿ ಹೇಳಿದರು.ಕುನಗಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಆಶ್ರಯದಲ್ಲಿ ರವಿವಾರದಂದು ನಡೆದ "ನಮ್ಮ ನಡೆ ಅಭಿವೃದ್ಧಿಯ ಕಡೆ" ಎಂಬ ಧ್ಯೇಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿ.ಹಿರೇಮಠ, ಕುನಗಾ ಗ್ರಾಮ ಪಂಚಾಯಿತಿ ಸದಸ್ಯರು .ಕುನ್ನೂರ,ಶ್ರೀಕಾಂತ ದುಂಡಿಗೌಡ್ರ, ಭರತ ಸೇವಾ ಸಂಸ್ಥೆ ಬನ್ನೂರು, ಶ್ರೀಮತಿ ದ್ರಾಕ್ಷಾಯಣಿ ಬ.ಚಿಕ್ಕೋಡಿ, ಮುತ್ತುರಾಜ ಕಿರಣ ಎಮ್ ಪಾಟೀಲ, ಸೇರಿದಂತೆ ಹಲವರು ಉಪಸ್ಥಿರರಿದ್ದರು.