ಬೆಂಗಳೂರು ಬಿಎಂಟಿಸಿಯಲ್ಲಿದ್ದ ಹಳೆ ಬಸ್ ಗಳು ಬೆಳಗಾವಿಗೆ; ಸಾರಿಗೆ ಇಲಾಖೆ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ

ಬೆಂಗಳೂರು ಬಿಎಂಟಿಸಿಯಲ್ಲಿದ್ದ ಹಳೆ ಬಸ್ ಗಳು ಬೆಳಗಾವಿಗೆ; ಸಾರಿಗೆ ಇಲಾಖೆ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ

ಬೆಂಗಳೂರು ಬಿಎಂಟಿಸಿಯಲ್ಲಿ ಬಳಕೆಯಾಗಿದ್ದ ಹಳೆಯ ಬಸ್ ಗಳನ್ನು ಸಾರಿಗೆ ಇಲಾಖೆ ಹುಬ್ಬಳ್ಳಿ, ಬೆಳಗಾವಿಗೆ ರವಾನಿಸಿದ್ದು, ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಿಎಂಟಿಸಿಗೆ ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ NWKRTC ಯ ಹುಬ್ಬಳ್ಳಿ, ಬೆಳಗಾವಿ ವಿಭಾಗಕ್ಕೆ ತಲಾ 50 ಹಳೆಯ ಬಸ್ಸುಗಳನ್ನು ಕಳಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಈ ಬಸ್ ಗಳು ಐದರಿಂದ ಆರು ಲಕ್ಷ ಕಿಲೋಮೀಟರ್ ಓಡಿದ್ದು, ಇದರ ಜೊತೆಗೆ ಬೆಳಗಾವಿ ವಿಭಾಗದಲ್ಲಿ 10 ಲಕ್ಷ ಕಿಲೋಮೀಟರ್ ಗೂ ಹೆಚ್ಚು ದೂರ ಸಂಚಾರ ನಡೆಸಿರುವ ನೂರಾರು ಬಸ್ಸುಗಳಿವೆ ಎನ್ನಲಾಗಿದೆ.