ನಾಳೆಯಿಂದಲೇ KSRTC ಅಂಬಾರಿ ಉತ್ಸವ: ಎಲ್ಲೆಲ್ಲಿ ಸಂಚರಿಸುತ್ತೆ ಗೊತ್ತಾ ಈ ಬಸ್?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಕಾಲಿಟ್ಟಿರೋ ನೂತನ ಅಂಬಾರಿ ಉತ್ಸವ ಬಸ್ ಗಳು ನಾಳೆಯಿಂದ ಅಧಿಕೃತವಾಗಿ ಸಂಚಾರ ನಡೆಸಲಿವೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ನೂತನ ಅಂಬಾರಿ ಉತ್ಸವ ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳನ್ನು ರಸ್ತೆಗಿಳಿಸಲಿದೆ.ನಾಳೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.
ಬಸ್ಸುಗಳು ಹೊರಡುವ ಮಾರ್ಗ, ಹೊರಡುವ ಬಸ್ ನಿಲ್ದಾಣ, ಹೊರಡುವ ಸಮಯ ಈವರೆಗೂ ಮುಂಗಡ ಕಾಯ್ದಿರಿಸಿರುವ ಆಸನಗಳ ವಿವರ ಈ ಕೆಳಕಂಡಂತಿದೆ.
1 ಬೆಂಗಳೂರು-ಹೈದರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 22:15 ಬುಕ್ಕಿಂಗ್ ಸಂಖ್ಯೆ - 15 ಸೀಟುಗಳು
2 ಬೆಂಗಳೂರು-ಹೈಟೆಕ್ ಸಿಟಿ, ಕೆಂಪೇಗೌಡ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ- 21 ಸೀಟುಗಳು
3. ಬೆಂಗಳೂರು-ಸಿಕಂದ್ರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 21:00 ಬುಕ್ಕಿಂಗ್ ಸಂಖ್ಯೆ -22 ಸೀಟುಗಳು
4 ಬೆಂಗಳೂರು-ಪಣಜಿ, ಕೆಂಪೇಗೌಡ ಬಸ್ ನಿಲ್ದಾಣ, 19:28 ಬುಕ್ಕಿಂಗ್ ಸಂಖ್ಯೆ - 14 ಸೀಟುಗಳು
5 ಬೆಂಗಳೂರು-ತ್ರಿಶೂರು , ಶಾಂತಿನಗರ ಬಸ್ ನಿಲ್ದಾಣ, 21:30 ಬುಕ್ಕಿಂಗ್ ಸಂಖ್ಯೆ -35 ಸೀಟುಗಳು
6 ಬೆಂಗಳೂರು-ಎರ್ನಾಕುಲಂ, ಶಾಂತಿನಗರ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ - 33 ಸೀಟುಗಳು
7 ಬೆಂಗಳೂರು-ತಿರುವನಂತಪುರ, ಶಾಂತಿನಗರ ಬಸ್ ನಿಲ್ದಾಣ, 16:13 ಬುಕ್ಕಿಂಗ್ ಸಂಖ್ಯೆ -25 ಸೀಟುಗಳು
ಸಾರ್ವಜನಿಕ ಪ್ರಯಾಣಿಕರು ಮೇಲ್ಕಂಡ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಈ ನೂತನ ಅಂಬಾರಿ ಉತ್ಸವ
ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.