ಜನವರಿ ಅಂತ್ಯಕ್ಕೆ ಬಸವರಾಜ್ ಬೊಮ್ಮಾಯಿ ಅಧಿಕಾರ ಹೋಗತ್ತೆ
ಜನವರಿ ಅಂತ್ಯಕ್ಕೆ ಬಸವರಾಜ್ ಬೊಮ್ಮಾಯಿ ಅಧಿಕಾರ ಹೋಗತ್ತೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಾಂಬ್ ಸಿಡಿಸಿದ್ದಾರೆ. ಬೊಮ್ಮಾಯಿ ಅವರು ಅವರು ಆಡಳಿತ ಮಾಡೋಕೆ ಸಮರ್ಥರಿಲ್ಲ. ಆದ ಕಾರಣ ಜನವರಿ ಅಂತ್ಯಕ್ಕೆ ಹೋಗ್ತಾರೆ ಎಂಬುದರ ಬಗ್ಗೆ ಬಹಳ ಸ್ಪಷ್ಟ ಮಾಹಿತಿಗಳು ನಮಗೆ ಬರ್ತಿವೆ. ನಿಶ್ವಿತವಾಗಿ ಇನ್ನು ಒಂದೂವರೆ ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗ್ತಾರೆ ಎಂದ ಅವರು ಬಿಜೆಪಿ ಹಿಂದೆ ಮೂರು ಜನರನ್ನ ಮುಖ್ಯಮಂತ್ರಿ ಮಾಡಿತ್ತು, ಈ ಬಾರಿ ನಾಲ್ವರು ಆಗಬಹುದು ಎಂದು ಭವಿಷ್ಯ ನುಡಿದರು.