ಧಾರವಾಡ | 'ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ'

ಧಾರವಾಡ | 'ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ'

ಅಳ್ನಾವರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಕಳೆದ ಒಂದು ತಿಂಗಳಿಂದ ಹಲವು ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದು, ಸರಿಯಾಗಿ ಪಾಠ ನಡೆಯದೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ.

ಸರ್ಕಾರ ಈ ಸಮಸ್ಯೆ ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ಕೆಲ ದಿನಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಇವೆ. ಪರೀಕ್ಷೆ ಎದುರಿಸುವದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಸರ್ಕಾರ ತಕ್ಷಣ ಸ್ಪಂದಿಸಿ, ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ‌

ರಾಹುಲ ಶಿಂದೆ, ಐಮನ್ ಕಾಂಟ್ರ್ಯಾಕ್ಟರ್, ತಮೀಮ ತೇರಗಾಂವ, ಸತ್ತಾರ ಬಾತಖಂಡಿ, ಯಲ್ಲಪ್ಪ ಹೂಲಿ, ನೇಹಲ್, ಸಮೀರ ಹಾದಿಮನಿ, ಪ್ರದೀಪ ಚಲವಾದಿ, ಕಿರಣ ಭಜಂತ್ರಿ, ಸಂಜನಾ ಕುನ್ನೂರಕರ, ಸಾವಂತ, ರಾಜೇಶ್ವರಿ ಮರಾಠಿ ಇದ್ದರು.