ನೆಟ್ ಫ್ಲಿಕ್ಸ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ
ಸ್ಮಾರ್ಟ್ ಟಿವಿ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಆದ್ರೆ ಅನೇಕರ ಮನೆಯಲ್ಲಿ ಸ್ಮಾರ್ಟ್ ಟಿವಿ ಇರುವುದಿಲ್ಲ. ಅಂತವರಿಗೆ ನೆಟ್ ಫ್ಲಿಕ್ಸ್ ನಲ್ಲಿರುವ ಬರುವ ವಿಡಿಯೋಗಳನ್ನು ಟಿವಿ ಮೂಲಕ ನೋಡಲು ಸಾಧ್ಯವಿರಲಿಲ್ಲ. ಮೊಬೈಲ್ ನಲ್ಲಿ ವೀಕ್ಷಿಸುವುದು ಅನಿವಾರ್ಯವಾಗಿತ್ತು. ಆದ್ರೀಗ ಈ ಚಿಂತನೆಯ ಅಗತ್ಯವಿಲ್ಲ. ಇನ್ಮುಂದೆ ಸಾಮಾನ್ಯ ಟಿವಿಯಲ್ಲೂ ನೀವು ನೆಟ್ ಫ್ಲಿಕ್ಸ್ ವಿಡಿಯೋಗಳನ್ನು ವೀಕ್ಷಿಸಬಹುದು.
ನೆಟ್ ಫ್ಲಿಕ್ಸ್ ನಲ್ಲಿ ಕಾಸ್ಟಿಂಗ್ ವೈಶಿಷ್ಟ್ಯವಿದೆ. ಸ್ಮಾರ್ಟ್ ಫೋನ್ ಮೂಲಕ ಅದನ್ನು ಟಿವಿಗೆ ಕನೆಕ್ಟ್ ಮಾಡಬಹುದು. ನೆಟ್ ಫ್ಲಿಕ್ಸ್ ಡೌನ್ಲೋಡ್ ಮಾಡಿಕೊಂಡು ಮೇಲೆ ಅಪ್ಲಿಕೇಷನ್ ಮೂಲೆಯಲ್ಲಿ ಕಾಸ್ಟ್ ಐಕಾನ್ ಕಾಣುತ್ತದೆ. ಅಲ್ಲಿ ಯಾವ ಡಿವೈಸ್ ಗೆ ನೀವು ಕಾಸ್ಟ್ ಮಾಡ್ತಿರಿ ಎಂಬುದನ್ನು ಆಯ್ಕೆ ಮಾಡಿ. ನಂತ್ರ ನೀವು ಯಾವ ವಿಡಿಯೋ ವೀಕ್ಷಣೆ ಮಾಡಲು ಬಯಸುತ್ತಿದ್ದೀರಿ ಅದನ್ನು ಪ್ಲೇ ಮಾಡಿ.
ಕಾಸ್ಟ್ ಫೀಚರ್ ಮೂಲಕ ನೀವು ಗೇಮಿಂಗ್ ಮಜವನ್ನು ಟಿವಿಯ ಮೂಲಕ ಪಡೆಯಬಹುದು. ಸೋನಿ ಪ್ಲೇಸ್ಟೇಷನ್ 4, ಸೋನಿ ಪ್ಲೇಸ್ಟೇಷನ್ 5, ಎಕ್ಸ್ ಬಾಕ್ಸ್ ಒನ್ ನಂತಹ ಆಟಗಳ ಅನುಭವವನ್ನು ಆನಂದಿಸಬಹುದು.