"25ನೇ ಸಿನಿಮಾ ಭೂಪತಿ ಮ್ಯಾಟನಿ ಶೋಗೆ ಬಿದ್ದು ಹೋಯ್ತು.. ಸೋಲು ಒಪ್ಪಿಕೊಳ್ಳೋಣ.":'ಕ್ರಾಂತಿ' ಸಂಭ್ರಮದಲ್ಲಿ ದರ್ಶನ್ ಮಾತು

ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 'ಕ್ರಾಂತಿ' ಮಾಡಿತೇ? ಸಿನಿಮಾ ತಂಡನೇ ಅಧಿಕೃತ ಮಾಹಿತಿ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಒಪ್ಪಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ದರ್ಶನ್ ಅಂತಹವರಿಗೆ ಸಕ್ಸಸ್ ಸಂಭ್ರಮದಲ್ಲಿ ಟಾಂಗ್ ಕೊಟ್ಟಿದ್ದಾರೆ.
ಈಗಾಗಲೇ ಚಿತ್ರತಂಡ 'ಕ್ರಾಂತಿ' ಸಿನಿಮಾ 109 ಕೋಟಿ ರೂ. ಬ್ಯುಸಿನೆಸ್ ಮಾಡಿದೆ ಎಂದು ಅಧಿಕೃತ ಮಾಹಿತಿ ನೀಡಿದೆ. ಸಕ್ಸಸ್ ಮೀಟ್‌ನಲ್ಲಿ 109 ಸಂಖ್ಯೆಯ ಕೇಕ್ ಕಟ್ ಮಾಡಿರುವುದೇ ಸಾಕ್ಷಿ. ಹೀಗಾಗಿ ದರ್ಶನ್ ಸೇರಿದಂತೆ ಇಡೀ ತಂಡ ಈ ಸಂಭ್ರಮದಲ್ಲಿ ಮುಳುಗಿ ಎದ್ದಿದೆ.
ಇದೇ ವೇಳೆ ದರ್ಶನ್ ಸಿನಿಮಾ ಗೆದ್ದಿಲ್ಲ ಎಂದವರಿಗೆ ತಿರುಗೇಟು ನೀಡಿದ್ದಾರೆ. ತಮ್ಮದೇ 25ನೇ ಸಿನಿಮಾ ಸೋಲಿನ ಉದಾಹರಣೆ ನೀಡಿ, 'ಕ್ರಾಂತಿ' ಸಕ್ಸಸ್ ರುಚಿ ತೋರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಸಕ್ಸಸ್ ಮೀಟ್‌ನಲ್ಲಿ 'ಕ್ರಾಂತಿ' ಗೆಲುವಿನ ಬಗ್ಗೆ ಏನು ಹೇಳಿದ್ದಾರೆ? ಅನ್ನೋದರ ಝಲಕ್ ಇಲ್ಲಿದೆ.