ವಂದೇ ಭಾರತ್ ರೈಲಿನಂತೇ ʻವಂದೇ ಮೆಟ್ರೋʼ ಅಭಿವೃದ್ಧಿ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಹೈದರಾಬಾದ್: ವಂದೇ ಭಾರತ್ ರೈಲುಗಳಂತೆಯೇ, ಹತ್ತಿರದ ಎರಡು ದೊಡ್ಡ ನಿಲ್ದಾಣಗಳ ನಡುವೆ ಚಲಿಸುವ 'ವಂದೇ ಮೆಟ್ರೋ(Vande Metro)' ಎಂಬ ರೈಲು ಪರಿಕಲ್ಪನೆಯನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಸಚಿವಾಲಯವನ್ನು ಕೇಳಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೈದರಾಬಾದ್‌ನಲ್ಲಿ ತಿಳಿಸಿದ್ದಾರೆ.
ಮಾನ್ಯ ಪ್ರಧಾನ ಮಂತ್ರಿಗಳು ಈ ವರ್ಷ ಒಂದು ಗುರಿಯನ್ನು ನೀಡಿದ್ದಾರೆ. ವಂದೇ ಭಾರತ್ ರೈಲಿನ ಯಶಸ್ಸಿನ ನಂತರ ವಂದೇ ಮೆಟ್ರೋ ಅಭಿವೃದ್ಧಿಪಡಿಸಲು ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.
'ವಂದೇ ಮೆಟ್ರೋ' ಪರಿಕಲ್ಪನೆಯನ್ನು ವಿವರಿಸಿದ ಅವರು, ತಲಾ 100 ಕಿಮೀಗಿಂತ ಕಡಿಮೆ ದೂರವಿರುವ ಎರಡು ನಗರಗಳ ನಡುವೆ ಹೆಚ್ಚಿನ ಆವರ್ತನದೊಂದಿಗೆ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಹೇಳಿದರು. ಅವರ ಪ್ರಕಾರ, ಈ ರೀತಿಯ ರೈಲುಗಳನ್ನು ಯುರೋಪ್ನಲ್ಲಿ 'ಪ್ರಾದೇಶಿಕ ಟ್ರಾನ್ಸ್' ಎಂದು ಕರೆಯಲಾಗುತ್ತದೆ.