ತ್ನಿ ಮೇಲೆ ಹಲ್ಲೆ, ಮಾಜಿ ಕ್ರಿಕೆಟಿಗ ʻವಿನೋದ್ ಕಾಂಬ್ಳಿʼ ವಿರುದ್ಧ ಎಫ್‌ಐಆರ್ ದಾಖಲು

ತ್ನಿ ಮೇಲೆ ಹಲ್ಲೆ, ಮಾಜಿ ಕ್ರಿಕೆಟಿಗ ʻವಿನೋದ್ ಕಾಂಬ್ಳಿʼ ವಿರುದ್ಧ ಎಫ್‌ಐಆರ್ ದಾಖಲು

Kambli) ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶುಕ್ರವಾರ ಮದ್ಯದ ಅಮಲಿನಲ್ಲಿದ್ದ ಪತ್ನಿಯ ಮೇಲೆ ಕಾಂಬ್ಳಿ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಕಾಂಬ್ಳಿ ವಿರುದ್ಧ ಪತ್ನಿಯೇ ದೂರು ಸಲ್ಲಿಸಿದ್ದಾರೆ.

ಬಾಂದ್ರಾ ಪೊಲೀಸರ ಪ್ರಕಾರ ಕಾಂಬ್ಳಿ ವಿರುದ್ಧ ಐಪಿಸಿಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸುವುದು) ಮತ್ತು 504 (ಅವಮಾನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವರದಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ 1 ರಿಂದ 1:30 ರ ನಡುವೆ ಕಾಂಬ್ಳಿ ಕುಡಿದು ಮನೆಗೆ ಬಂದಾಗ ಘಟನೆ ನಡೆದಿದೆ. ಕಾಂಬ್ಳಿ ತನ್ನ ಪತ್ನಿ ಆಂಡ್ರಿಯಾ ಮೇಲೆ ಅಡುಗೆ ಪ್ಯಾನ್‌ನ ಹಿಡಿಕೆಯನ್ನು ಎಸೆದರು. ಇದರಿಂದಾಗಿ ಆಂಡ್ರಿಯಾ ತಲೆಗೆ ಗಾಯ ಆಗಿದೆ. I ವೇಳೆ, ಅವರ 12 ವರ್ಷದ ಮಗ ಅಲ್ಲೇ ಇದ್ದು, ಅವರು ಕಾಂಬ್ಳಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಮಾತನಾಡಿದ ಕಾಂಬ್ಳಿ ಪತ್ನಿ ಆಂಡ್ರಿಯಾ , ವಿಷಯ ಬಗೆಹರಿಯುತ್ತಿದೆ ಎಂದು ಹೇಳಿದ್ದಾರೆ. ವಿನೋದ್ ಕಾಂಬ್ಳಿ ಅವರು 2014 ರಲ್ಲಿ ಬಾಂದ್ರಾದ ಸೇಂಟ್ ಪೀಟರ್ ಚರ್ಚ್‌ನಲ್ಲಿ ಆಂಡ್ರಿಯಾ ಹೆವಿಟ್ ಅವರನ್ನು ವಿವಾಹವಾದರು.