ಅ.28 ರಂದು ರಾಜ್ಯದ ಶಾಲೆಗಳಲ್ಲಿ 'ಕೋಟಿ ಕಂಠ ಗಾಯನ' : ಮೊಳಗಲಿದೆ 'ಬಾರಿಸು ಕನ್ನಡ ಡಿಂಡಿಮವ'

ಅ.28 ರಂದು ರಾಜ್ಯದ ಶಾಲೆಗಳಲ್ಲಿ 'ಕೋಟಿ ಕಂಠ ಗಾಯನ' : ಮೊಳಗಲಿದೆ 'ಬಾರಿಸು ಕನ್ನಡ ಡಿಂಡಿಮವ'

ಬೆಂಗಳೂರು :ಅ.28 ರಂದು ರಾಜ್ಯದ ಶಾಲೆಗಳಲ್ಲಿ 'ಕೋಟಿ ಕಂಠ ಗಾಯನ'ಮೊಳಗಲಿದ್ದು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿನೂತನವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿದೆ.

ಅ.28 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿದ್ದು, ನಾಡು ನುಡಿದ ಶ್ರೇಷ್ಟತೆ ಸಾರುವ 5 ಗೀತೆಗಳನ್ನು ಹಾಡಲು ಸಾಮೂಹಿಕ ಗಾಯನ ಏರ್ಪಡಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಶಿಕ್ಷಣ ಲಾಖೆ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಅ.28 ರಂದು ಬೆಳಗ್ಗೆ 11 ಗಂಟೆಗೆ ನನ್ನ ಹಾಡು ನನ್ನ ಹಾಡು ಸಮೂಹ ಗೀತೆ ಗಾಯನ ಏರ್ಪಡಿಸಿ ಮೊದಲು ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ ಹಾಡಬೇಕು' ಎಂದು ಸೂಚನೆ ನೀಡಿದೆ.

ಅದೇ ರೀತಿ ಕುವೆಂಪುರವರ 'ಬಾರಿಸು ಕನ್ನಡ ಡಿಂಡಿಮವ', ಡಿ ಎಸ್ ಕರ್ಕಿ ಅವರ 'ಹಚ್ಚೇವು ಕನ್ನಡ ದೀಪ', ನಾಡೋಚ ಚನ್ನವೀರ ಕಣವಿ ಅವರ 'ವಿಶ್ವ ವಿನೂತನ ವಿದ್ಯಾ ಚೇತನ', ಹಂಸಲೇಖರವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಗೂ ಉಯಿಲಗೋಳ ನಾರಾಯಣರಾಯರ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಹಾಡನ್ನು ಹಾಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮುಂದುವರೆದು ವಿದ್ಯಾರ್ಥಿಗಳು , ಶಿಕ್ಷಕರು ಸಾರ್ವಜನಿಕರು ಹೆಚ್ಚಿನ ಸಂಖ‍್ಯೆಯಲ್ಲಿ ಭಾಗವಹಿಸುವಂತೆ ನೋಡಿಕೊಂಡು , ಈ ಗೀತೆಗಳನ್ನು ಹಾಡುವ ಧಾಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೂಟ್ಯೂಬ್ ಚಾನೆಲ್ ಲಿಂಕ್ ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಸೂಚನೆ ನೀಡಿದೆ. ಈ ಮೂಲಕ ಕನ್ನಡ ಹಾಡಿನ ಕಂಪು ಶಾಲೆಶಾಲೆಗಳಲ್ಲಿ ಫಸರಿಸಲಿದೆ.