ಬೆಂಗಳೂರು: ಸಲೂನ್ ಶಾಪ್‌ನಲ್ಲಿ ಸಹಾಯಕಿ ಮೇಲೆ ಲೈಂಗಿಕ ಕಿರುಕುಳ, ಬಂಧನ

ಬೆಂಗಳೂರು: ಸಲೂನ್ ಶಾಪ್‌ನಲ್ಲಿ ಸಹಾಯಕಿ ಮೇಲೆ ಲೈಂಗಿಕ ಕಿರುಕುಳ, ಬಂಧನ

ಬೆಂಗಳೂರು, ಫೆಬ್ರವರಿ 20: ಸಲೂನ್ ಶಾಪ್‌ನಲ್ಲಿ ಯುವತಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 14ರಂದು ಪ್ರೇಮಿಗಳ ದಿನ. ಅಂದು ಜಯನಗರದ ಯುನಿಸೆಕ್ಸ್ ಸಲೂನ್‌ನಲ್ಲಿ 21ವರ್ಷದ ಯುವತಿಯೊಬ್ಬರ ಮೇಲೆ 42 ವರ್ಷದ ಆರೋಪಿ ಲೈಂಗಿಕ ಕಿರುಕುಳ ಎಸಗಿರುವುದು ದೃಢಪಟ್ಟಿದ್ದು, ಇತ್ತೀಚೆಗಷ್ಟೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವ್ಯಕ್ತಿ ರವೀಂದ್ರ ಶೇಟ್ಟಿ ಎನ್ನಲಾಗಿದ್ದು,ಆತ ಇದೇ ಸಲೂನ್ ನಡೆಸುತ್ತದ್ದ ಮಾಲೀಕರ ಸಂಬಂಧಿಯಾಗಿದ್ದು, ನಿತ್ಯ ಅಲ್ಲಿಗೆ ಬರುತ್ತಿದ್ದ. ಸಂತ್ರಸ್ತ ಮಹಿಳೆಯುವ ಯುನಿಸೆಕ್ಸ ಸಲೂನ್‌ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಅಧಿಕಾರಿಗಳು ಹೇಳುವ ಪ್ರಕಾರ, ಫೆಬ್ರವರಿ 14 ರಂದು ಮಧ್ಯಾಹ್ನ 3 ಗಂಟೆಗೆ ಯುವತಿ ಸಲೂನ್‌ನಲ್ಲಿ ಒಬ್ಬಂಟಿಯಾಗಿದ್ದಾಗ ಈತ ಲೈಂಗಿಕ ಕಿರುಕುಳ ಎಸಗಿದ್ದಾನೆ.

ಅಂದು ಮಧ್ಯಾಹ್ನ ಆರೋಪಿ ಮಹಿಳೆ ಬಳಿ ವ್ಯವಹಾರ ಕುರಿತು ಮಾತನಾಡಿದ್ದಾನೆ. ಬಳಿಕ ಶೆಟ್ಟಿ ತಲೆನೋವು ಇದ್ದು, ಮಸಾಜ್ ಮಾಡುವಂತೆ ಕೇಳಿದ್ದ ಎನ್ನಲಾಗಿದೆ. ನಂತರ ಸಹಾಯಕಿಯನ್ನು ಸಿಬ್ಬಂದಿ ಕೊಠಡಿಗೆ ಎಳೆದೊಯ್ದು ಅನುಚಿತವಾಗಿ ನಡೆದುಕೊಂಡಿದ್ದಾನೆ. ಇದನ್ನು ಆಕ್ಷೇಪಿಸಿದ ಸಹಾಯಕಿ ಎಚ್ಚರಿಕೆ ನೀಡಿದ್ದಾರೆ. ನಿನ್ನ ಯಾರೂ ರಕ್ಷಿಸಲು ಇಲ್ಲಿ ಬರುವುದಿಲ್ಲ ಎಂದ ಆರೋಪಿ ಜಾತಿ ಆಧಾರಿತ ನಿಂದನೆ ಮಾಡಿದ್ದಾನೆ ಎಂದು ಸಹಾಯಕಿ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಯ ಕುರಿತು ಸಲೂನ್ ಮಾಲೀಕರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಯುವತಿ ಜಯನಗರ ಪೊಲೀಸರನ್ನು ಸಂಪರ್ಕಿಸಿ ಕಳೆದ ಫೆಬ್ರವರಿ 16 ರಂದು ದೂರು ಸಲ್ಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ, 1989 ರ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ರವೀಂದ್ರ ಶೆಟ್ಟಿ ಬಂಧಿಸಿ ಇಬ್ಬರಿಗೆ ವೈದ್ಯಕೀಯ ತಪಾಸಣೆ ನಡೆಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಈ ಸಲೂನ್‌ನಲ್ಲಿ ಸಂತ್ರಸ್ತೆ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ಮಾಲೀಕತ್ವದಲ್ಲಿ ಬದಲಾವಣೆಯಾದ ನಂತರವೂ ಅವರು ಅಲ್ಲೇ ಉದ್ಯೋಗ ಮುಂದುವರೆದಿದ್ದರು ಎಂದು ತಿಳಿದು ಬಂದಿದೆ.