ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳೋ ನಿರ್ಣಯಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಸಚಿವ ಬೈರತಿ ಬಸವರಾಜ.

ಹಾವೇರಿ ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳೋ ನಿರ್ಣಯಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ, ಸಹಕಾರ ಕೊಟ್ಟಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು ಬೆಂಗಳೂರು ನಗರಕ್ಕೆ ಕುಡಿಯೋ ನೀರು ತರುವ ಮೇಕೆದಾಟು ಯೋಜನೆಗೆ ನಾವೆಲ್ಲ ಕಟಿಬದ್ದರಾಗಿದ್ದೇವೆ. ತಮಿಳುನಾಡು ಎಷ್ಟೇ ವಿರೋಧ ಮಾಡಿದ್ರೂ ಖಂಡಿತವಾಗಿ ಯೋಜನೆಯನ್ನ ನಾವು, ನಮ್ಮ ಮುಖ್ಯಮಂತ್ರಿಗಳು ಮಾಡೋದ್ರಲ್ಲಿ ಯಾವುದೇ ಸಂಶಯವಿಲ್ಲ. ಸಿ.ಟಿ.ರವಿ ಸಹ ಕನ್ನಡನಾಡು, ನುಡಿ, ಜಲ ವಿಚಾರ ಬಂದಾಗ ರಾಜಕಾರಣವಿಲ್ಲ. ನಾವೆಲ್ಲರೂ ಕೂಡ ಕರ್ನಾಟಕ ರಾಜ್ಯದ ಪರವಾಗಿ ಇರ್ತೇವೆ ಅನ್ನೋ ಮಾತನ್ನ ಸಿ.ಟಿ.ರವಿ ಹೇಳಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.