ಬಸವಗುರುವಿನ ತತ್ವದಂತೆ ಪಂಚಮಿ ಆಚರಣೆ
ಹುಬ್ಬಳ್ಳಿ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ಮಹಿಳಾ ಘಟಕದ ಸಹಯೋಗದೊಂದಿಗೆ ನಾಗರ ಪಂಚಮಿ ಹಬ್ಬ ಆಚರಣೆ. ಕಳೆದ 24 ನೇ ವರ್ಷದ ನಾಗರ ಪಂಚಮಿ ಪ್ರಯುಕ್ತ ಕಲ್ಲು ನಾಗರಕ್ಕೆ ಹಾಕುವ ಹಾಲು ಬಡಮಕ್ಕಳ ಪಾಲಗಲಿ ಎಂದು ನವನಗರದ ಚನ್ನ ಬಸವೇಶ್ವರ ಶಾಲೆಯ ಆವರಣದಲ್ಲಿ ಬಡ ಮಕ್ಕಳಿಗೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತ್ರತ್ವದಲ್ಲಿ ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಲು ಕುಡಿಯಲು ಕೊಡುಬ ಮೂಲಕ ನಾಗರ ಪಂಚಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೀಪಾ ನಾಗರಾಜ ಗೌರಿ, ಜಿಲ್ಲಾ ಅಧ್ಯಕ್ಷರು ಚನ್ನಮ್ಮ ಬಳಗ ಪಂಚಮಸಾಲಿ, ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.