ವಾಲ್ಮೀಕಿ ಜಯಂತಿ ಆಚರಣೆ
ಬೆಂಗಳೂರು ಪೂರ್ವ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು, ಈ ಸಂದರ್ಭದಲ್ಲಿ ಸಮುದಾಯದ ಸ್ವಾಮೀಜಿಗಳಾದ ಈಶ್ವರಾನಂದ ಸ್ವಾಮಿಗಳು, ಬ್ರಹ್ಮಾನಂದ ಸ್ವಾಮಿಗಳು, ಬೆಂಗಳೂರು ಪೂರ್ವ ತಾಲೂಕು ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು, ಇದೇ ವೇಳೆ ಜನಾಂಗಕ್ಕೆ ಅಗತ್ಯವಿರುವ ಸಮುದಾಯ ಭವನ, ವಸತಿ ನಿಲಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಿದರು. ಈ ಬಗ್ಗೆ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಮುತ್ಸದಿಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ವಾಲ್ಮೀಕಿ ಮಹಾಸಭಾ ಪೋಷಕರಾದ ಬಾಕ್ಸರ್ ನಾಗರಾಜ್ ತಿಳಿಸಿದರು.