ಬದಲಾದ ಪಡಿತರ ಲಾರಿ ತಹಸೀಲ್ದಾರ್ ರಿಂದ ನೋಟೀಸ್ ಜಾರಿ

ಟೆಂಡರ್ ಆದ ಲಾರಿಯ ಬದಲಾಗಿ ಬೇರೆ ಲಾರಿಯಲ್ಲಿ ಸರ್ಕಾರದ ಪಡಿತರ ಅಕ್ಕಿ ರಾಗಿಯನ್ನು ಸಾಗಿಸುತ್ತಿದ್ದ ಹಿನ್ನಲೆಯಲ್ಲಿ ಇಲ್ಲಿನ ಕೆ.ಎಸ್.ಎಫ್.ಸಿ ಸಗಟು ಮಳಿಗೆ ವ್ಯವಸ್ಥಾಪಕ ಜಿ. ಈಶ್ವರಪ್ಪ ಹಾಗೂ ಪಡಿತರ ಸಾಗಾಣಿಕೆ ಗುತ್ತಿಗೆದಾರ ಬೇಲ್ದಾರ್ ಭಾಷಾ ಗೆ ತಹಸೀಲ್ದಾರ್ ಎಂ. ಕುಮಾರ ಸ್ವಾಮಿ ನೋಟೀಸ್ ಜಾರಿಗೊಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಸಗಟು ಮಳಿಗೆಯಿಂದ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಗ್ರಾಮಕ್ಕೆ ಸರ್ಕಾರದ ಪಡಿತರ 551 ಚೀಲ ಅಕ್ಕಿ ಮತ್ತು ರಾಗಿಯನ್ನು ಸಾಗಣೆಯಾಗುತ್ತಿದ್ದ ಲಾರಿಯನ್ನು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಪರಿಶೀಲಿಸಿದಾಗ. ಕೆ.ಎಸ್.ಎಫ್.ಸಿ ಕೊಟ್ಟ ಲಾರಿ ನಂಬರ್ ಮತ್ತು ರಸೀದಿ ಬೇರೆಯಾಗಿತ್ತು. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಆದರೆ ಲಾರಿ ಮಾಲೀಕರು ಲಾರಿ ಕೆಟ್ಟು ಹೋಗಿದ್ದರಿಂದ ಲಾರಿ ಬದಲಾಯಿಸಲಾಗಿದೆ. ಇದು ಅಕ್ರಮ ಸಾಗಾಟ ಅಲ್ಲ ಎಂದಿದ್ದಾರೆ.ಆದರೆ ಪಡಿತರ ಸಾಗಿಸುವ ಲಾರಿ ಮಾರ್ಗದ ನಡುವೆ ಕೆಟ್ಟರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪಡಿತರವನ್ನು ವರ್ಗಾವಣೆ ಮಾಡಬೇಕಾಗಿತ್ತು. ಕಾಳ ಸಂತೆಯಲ್ಲಿ ಪಡಿತರ ಮಾರಾಟ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಒಟ್ಟಾರೆ ತಹಸೀಲ್ದಾರ್ ಈ ಕುರಿತು ಸಮಗ್ರ ತನಿಖೆ ನಡೆಸಬೇಕಾಗಿದೆ. 9ಲೈವ್ ಕೊಟ್ಟೂರ್ ಇದಕ್ಕೂ ಮೊದಲು ತಹಸೀಲ್ದಾರ್ ಎಂ. ಕುಮಾರಸ್ವಾಮಿ. ಲಾರಿ ನಂಬರ್. ಸಗಟು ಮಳಿಗೆ ನೀಡಿರುವ ದಾಖಲೆಗೂ ವ್ಯಾತ್ಯಾಸವಿರುವುದು ಸಂಶಯಮೂಡಿಸಿದೆ.ಲಾರಿಯನ್ನು ವಶಪಡಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದರು. ಲಾರಿ ಕೆಟ್ಟಿತ್ತು ಆಗಾಗಿ ಬೇರೆ ಲಾರಿಯಲ್ಲಿ ಪಡಿತರವನ್ನು ಸಾಗಿಸಲಾಗಿತ್ತು ಎಂದು ಕೆ.ಎಸ್.ಎಫ್.ಸಿ ವ್ಯವಸ್ಥಾಪಕ ಜಿ. ಈಶ್ವರಪ್ಪ ಹಾಗೂ ಲಾರಿ ಗುತ್ತಿಗೆದಾರ ಬೇಲ್ದಾರ್ ಭಾಷಾ ಹೇಳಿಕೆ ಗೊಂದಲ ಮೂಡಿಸಿದೆ. ತಹಸೀಲ್ದಾರ್ ನೋಟೀಸ್ ಗೆ ಲಾರಿಗಳ ಗುತ್ತಿಗೆದಾರ ಬೇಲ್ದಾರ್ ಭಾಷಾ. ಕೆ.ಎಸ್.ಎಫ್.ಸಿ. ಸಗಟು ಮಳಿಗೆ ವ್ಯವಸ್ಥಾಪಕ ಎಂ. ಈಶ್ವರಪ್ಪ ಇನ್ನೂ ಉತ್ತರಿಸಿಲ್ಲ. ಇವರ ಉತ್ತರವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಕಳುಹಿಸಲಾಗುವುದು ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ತಿಳಿಸಿದ್ದಾರೆ. ಬದಲಾದ ಲಾರಿ ಪ್ರಕರಣವೀಗ ವಿಜಯನಗರ ಜಿಲ್ಲಾಧಿಕಾರಿ ಮುಂದಿದೆ. ಅವರೇನು ಕ್ರಮ ಕೈಗೊಳ್ಳತ್ತಾರೊ ಕಾದು ನೋಡಬೇಕು. ಅಕ್ಟೋಬರ್ 30 ಕೊಟ್ಟೂರು 05 ಕೊಟ್ಟೂರು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಅಕ್ಟೋಬರ್ 20ರಂದು ಲಾರಿ ನಂಬರ್ ಮತ್ತು ದಾಖಲೆ ಸರಿ ಇಲ್ಲದ ಪರಿತರ ಸಾಗಾಣಿಕೆ ಲಾರಿಯನ್ನು ವಶಪಡಿಸಿಕೊಂಡು ನಂತರ ಬಿಡುಗಡೆಮಾಡಿರುವುದು. ಕಂದಾಯ ನಿರೀಕ್ಷಕ ಹಾಲಸ್ವಾಮಿ ಇದ್ದರು.