ಹಾಡಿನ ಮೂಲಕ ಪುನೀತಗೆ ಶ್ರದ್ಧಾಂಜಲಿ ಸಲ್ಲಿಸಿದ ಕಲಾವಿದರು

ನಟ ಪುನೀತ್ ರಾಜ್ಕುಮಾರ್ ಅಗಲಿಕೆ ತಾಳಲಾರದೇ ಹುಬ್ಬಳ್ಳಿಯ ಸಂತೋಷ ಕಲಾವಿದರಿಂದ ಹಾಡುಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ರು. ಇನ್ನು ಗಾಯಕರಾದ ಅಂಬೇಶ್ ಊಟವಲೆ, ಫೆಡ್ರಿಕ್ ಮುರ್ವಾನಿ, ವಿವೇಕ ಜಾಲಿಹಾಳ ಅವರು ಕೆಲವು ಗಂಟೆಗಳ ಕಾಲ ನಾಡಿನ ಖ್ಯಾತ ಬರಹಗಾರರ ಹಾಡುಗಳನ್ನು ಹಾಡಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲಾಯಿತು. ಪುನೀತ್ ರಾಜ್ ಕುಮಾರ್ ಅವರು ಚಿಕ್ಕವಯಸ್ಸಿನಲ್ಲೇ ಬಹುಮುಖ ವ್ಯಕ್ತಿತ್ವ ರೂಪಿಸಿಕೊಂಡವರು. ಇವರ ಸಾವು ವಿಷಾದನೀಯ ಹಾಗೂ ನೋವುಂಟು ಮಾಡಿದೆ ಎಂದು ಹುಬ್ಬಳ್ಳಿ ನೋವು ವ್ಯಕ್ತಪಡಿಸಿದರು.