ಪ್ರಧಾನಿ ಮೋದಿ ಅವರಿಂದ ವಿದ್ಯಾರ್ಥಿಗಳ ಜೊತೆ 'ಪರೀಕ್ಷಾ ಪೇ ಚರ್ಚಾ'
ಪ್ರಧಾನಿ ನರೇಂದ್ರ ಮೋದಿಯವರು ಜನವರಿ 27ರಂದು ವಿದ್ಯಾರ್ಥಿಗಳ ಜೊತೆ 'ಪರೀಕ್ಷಾ ಪೇ ಚರ್ಚಾ' ನಡೆಸಲಿದ್ದು, ಇದಕ್ಕಾಗಿ ಒಟ್ಟು 31.24 ಲಕ್ಷ ವಿದ್ಯಾರ್ಥಿಗಳು, 5.6 ಲಕ್ಷ ಶಿಕ್ಷಕರು ಹಾಗೂ 1.95 ಲಕ್ಷ ಪೋಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ನವದೆಹಲಿಯ ತಲಕತೋರಾ ಸ್ಟೇಡಿಯಂನಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದ್ದು, ನೇರವಾಗಿ ಭಾಗವಹಿಸುವುದರ ಜೊತೆಗೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.