ದೇಶದಲ್ಲಿಯೇ 'ಎ' ಗ್ರೇಡ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಮಂಗಳೂರು ಮೀನುಗಾರಿಕೆ ಬಂದರು ಆಯ್ಕೆ

ದೇಶದಲ್ಲಿಯೇ 'ಎ' ಗ್ರೇಡ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಮಂಗಳೂರು ಮೀನುಗಾರಿಕೆ ಬಂದರು ಆಯ್ಕೆ

ಮಂಗಳೂರು : ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಆರೋಗ್ಯಕರ ಪರಿಕಲ್ಪನೆಯಲ್ಲಿ ಮಂಗಳೂರು ಮೀನುಗಾರಿಕೆ ಬಂದರನ್ನು ದೇಶದಲ್ಲಿಯೇ ಎ ಗ್ರೇಡ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು ಪೂರಕ ಸಿದ್ಧತೆ ಆರಂಭವಾಗಿದೆ.

ದೇಶದ ಎಲ್ಲ ಮೀನುಗಾರಿಕೆ ಬಂದರುಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಂಡು ಗುಣಮಟ್ಟದ ಮೀನುಗಾರಿಕೆಗೆ ಆತಿಥ್ಯ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಕಾರ್ಯ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಬಂದರನ್ನು ಎ ಗ್ರೇಡ್ ಮಾದರಿಯಲ್ಲಿ ರೂಪಿಸಿಕೊಂಡು ಮೀನು ರಫ್ತು ಮಾಡುವ ಪರಿಕಲ್ಪನೆಗೂ ಇನ್ನಷ್ಟು ಶಕ್ತಿ ನೀಡುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಇದರಂತೆ ಮಂಗಳೂರು ಮೀನುಗಾರಿಕೆ ಬಂದರನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರು ಮೀನುಗಾರಿಕೆ ಬಂದರನ್ನು ಆರೋಗ್ಯಪೂರಕ ಪ್ರವಾಸಿ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರವು ಕೃಷಿ ವಿಕಾಸ ಯೋಜನೆಯಲ್ಲಿ ಅನುದಾನ ನೀಡಲಿವೆ. ಈ ಯೋಜನೆಯ ಅಧಿಕಾರಿಗಳ ಉನ್ನತ ಮಟ್ಟದ ತಂಡ ಈಗಾಗಲೇ ಬಂದರಿಗೆ ಭೇಟಿ ನೀಡಿದೆ.

ಇಲ್ಲಿನ ಮುಖ್ಯ ಆವಶ್ಯಕತೆಗಳ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿದೆ. ಮೀನುಗಾರಿಕೆ ಪ್ರಮುಖ ಅಧಿಕಾರಿಗಳ ಜೊತೆಗೂ ತಂಡ ಚರ್ಚೆ ನಡೆಸಿದೆ. ಬಂದರು ಮೇಲ್ದರ್ಜೆಯ ಅವಶ್ಯಕ ಸಂಗತಿಗಳ ಬಗ್ಗೆ ವಿವರಣೆ ಪಡೆದುಕೊಂಡಿದೆ. ಇದರ ಆಧಾರದಲ್ಲಿ ಮುಂದಿನ ದಿನದಲ್ಲಿ ಯೋಜನೆಯ ಸರ್ವೆ ವಿವರ ಸಂಗ್ರಹಿಸಲು ತಾಂತ್ರಿಕ ಪರಿಣತರ ತಂಡ ಬಂದರಿಗೆ ಆಗಮಿಸಲಿವೆ. ಇಲ್ಲಿ ಕೈಗೊಳ್ಳಬೇಕಾದ ಯೋಜನೆ ತಗಲುವ ವೆಚ್ಚ ಅವಕಾಶ ಸುಧಾರಣೆ ಕ್ರಮಗಳ ಬಗ್ಗೆ ಸಮೀಕ್ಷೆ ನಡೆಸಲಿವೆ. ಆ ವರದಿಯನ್ನು ಕೃಷಿ ವಿಕಾಸ ಯೋಜನೆಯ ಕೇಂದ್ರ ಕಚೇರಿಗೆ ಸಲ್ಲಿಸಲಿದೆ ಬಳಿಕ ಕೇಂದ್ರ ಅನುದಾನ ಬಿಡುಗಡೆ ಮಾಡಲಿವೆ.

ಮೀನುಗಾರಿಕೆ ಬಂದರಿನಲ್ಲಿ ಬಳಕೆ ಮಾಡಿದ ಕಲುಷಿತ ನೀರನ್ನು ಸಂಸ್ಕರಿಸಿ ಇತರ ಬಳಕೆಗೆ ಬಿಡುವ ಪರಿಕಲ್ಪನೆ, ಉಪ್ಪು ನೀರು ಸಂಸ್ಕರಣಾ ಘಟಕ, ಮೀನುಗಾರಿಕೆಗೆ ಬಳಕೆ ಮಾಡಲು ಅನುಕೂಲ ಬಂದರಿನ ಹರಾಜು ಪ್ರಾಂಗಣ ಸುಸಜ್ಜಿತ ಮಾದರಿ ಅಭಿವೃದ್ಧಿ, ಬಂದರು ಸಂಪರ್ಕ ರಸ್ತೆ ಅಭಿವೃದ್ಧಿ, ಸಿಸಿ ಕ್ಯಾಮರಾ ಅಳವಡಿಕೆ, ಪಾರ್ಕಿಂಗ್ ವ್ಯವಸ್ಥೆ ಸುಸಜ್ಜಿತಗೊಳಿಸಲು ಯೋಜನೆ, ಬಂದರು ವ್ಯಾಪ್ತಿಯಲ್ಲಿ ಸೋಲಾರ್ ಲೈಟ್ ಸುಸಜ್ಜಿತ ಶೌಚಗೃಹ ಇದು ಪ್ರಸ್ತಾಪಿಸಲಾಗಿರುವ ಬೇಡಿಕೆಗಳು