ಮುಖ್ಯಮಂತ್ರಿ ರೈತ ವಿದ್ಯಾನಿಧಿ ಶಿಷ್ಯವೇತನ ಅರ್ಜಿ ಆಹ್ವಾನ

ಬೆಂಗಳೂರು: ಕೃಷಿ ಇಲಾಖೆಯು ಮುಖ್ಯಮಂತ್ರಿಯವರ ರೈತ ವಿದ್ಯಾನಿಧಿ ಕಾರ್ಯಕ್ರಮದ ಅಡಿಯಲ್ಲಿ ಎಸ್.ಎಸ್.ಎಲ್.ಸಿ. ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿ ಅಧಿಕೃತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗಕ್ಕೆ ಪ್ರವೇಶವನ್ನು ಪಡೆದಿರುವ ರೈತರ ಮಕ್ಕಳಿಗೆ ಶಿಷ್ಯವೇತನವನ್ನು ನೀಡಲಾಗುತ್ತಿದೆ.
2021-22ನೇ ಆರ್ಥಿಕ ವರ್ಷದ ಸಾಲಿನಿಂದ ಪ್ರಸ್ತುತ ಯೋಜನೆಯನ್ನು ಜಾರಿಗೆ ತರಲಾಗಿದೆ ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಕೋರ್ಸ್‍ಗಳ ಬಾಲಕರಿಗೆ 2,500/-ರೂ.ಗಳು ಬಾಲಕಿಯರು ಹಾಗೂ ತೃತೀಯಲಿಂಗದವರಿಗೆ 3,000/-ರೂ.ಗಳು. ಬಿ.ಎ., ಬಿ.ಎಸ್.ಸಿ., ಬಿ.ಕಾಂ. ಮುಂತಾದ ಪದವಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪುರುಷ ವಿದ್ಯಾರ್ಥಿಗಳಿಗೆ 5,000/-ರೂ.ಗಳು ಮಹಿಳೆಯರು ಹಾಗೂ ತೃತೀಯ ಲಿಂಗದವರಿಗೆ 5,500/-ರೂ.ಗಳು. ಎಲ್.ಎಲ್.ಬಿ., ಪ್ಯಾರಾ ಮೆಡಿಕಲ್, ಬಿ.ಫಾರ್ಮ, ನರ್ಸಿಂಗ್ ಮುಂತಾದ ವೃತ್ತಿಪರ ಕೋರ್ಸ್‍ಗಳಿಗೆ ಪುರುಷರಿಗೆ 7,500/-ರೂ.ಗಳು ಮಹಿಳೆಯರು ಹಾಗೂ ತೃತೀಯ ಲಿಂಗದವರಿಗೆ 8,000/-ರೂ.ಗಳು. ಎಂ.ಬಿ.ಬಿ.ಎಸ್, ಬಿ.ಇ, ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳಿಗೆ ಪುರುಷರಿಗೆ 10,000/-ರೂ.ಗಳು ಮಹಿಳೆಯರು ಹಾಗೂ ತೃತೀಯ ಲಿಂಗದವರಿಗೆ 11,000/-ರೂ.ಗಳ ವಾರ್ಷಿಕ ಶಿಷ್ಯವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು.
ವಿದ್ಯಾರ್ಥಿಗಳ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನು ಇರಬೇಕು. ಇಬ್ಬರ ಪೈಕಿ ಒಬ್ಬರ ಹೆಸರಿಗೆ ಕೃಷಿ ಇಲಾಖೆಯ ಎಫ್‍ಐಡಿ ಸಂಖ್ಯೆ ಇರಬೇಕಾಗಿರುತ್ತದೆ. ರಾಜ್ಯ ಸರಕಾರ ಕೊಡುವ ಇತರೆ ಶಿಷ್ಯ ವೇತನವನ್ನು ಪಡೆಯದೇ ಇರುವ ವಿದ್ಯಾರ್ಥಿಗಳು https://ssp.postmatric.karnataka.gov.in/ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನ ಪ್ರಾಚಾರ್ಯರನ್ನು ಅಥವಾ ಹತ್ತಿರದ ಕೃಷಿ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.