ಲಂಚ ಪಡೆಯುತ್ತಿದ್ದ ಕಿತ್ತೂರು ತಹಶೀಲ್ದಾರ ಲೋಕಾಯುಕ್ತ ಬಲೆಗೆ

ಲಂಚ ಪಡೆಯುತ್ತಿದ್ದ ಕಿತ್ತೂರು ತಹಶೀಲ್ದಾರ ಲೋಕಾಯುಕ್ತ ಬಲೆಗೆ

ಬೆಳಗಾವಿ: ತಂದೆ ಹೆಸರಿನಲ್ಲಿದ್ದ ಜಮೀನನ್ನು ಮಗನ ಹೆಸರಿಗೆ ಬದಲಾವಣೆ ಮಾಡಲು ಲಂಚ ಪಡೆಯುತ್ತಿದ್ದ ಚನ್ನಮ್ಮನ ಕಿತ್ತೂರು ತಹಶೀಲ್ದಾರ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಚನ್ನಮ್ಮನ ಕಿತ್ತೂರು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಹಾಗೂ ಕಚೇರಿ ಭೂ ಸುಧಾರಣಾ ವಿಷಯಗಳ ನಿರ್ವಾಹಕ ಪ್ರಸನ್ನ ಜಿ.

ಎಂಬವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಲಂಚ ಸಮೇತ ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಹೇಬ ಇನಾಮದಾರ ಎಂಬವರ ಪಹಣಿ ಪತ್ರಿಕೆಯಲ್ಲಿ ಖಾತಾ ಬದಲಾವಣೆ ಮಾಡಲು 5 ಲಕ್ಷ ರೂ. ಲಂಚ ಕಿತ್ತೂರು ತಹಶೀಲ್ದಾರ ಸೋಮಲಿಂಗ ಹಲಗಿ ಬೇಡಿಕೆ ಇಟ್ಟಿದ್ದರು. 10 ಎಕರೆ ಜಮೀನನ್ನು ನೋಂದ ಮಾಡಿಕೊಡಲು ಹಾಗೂ ಅದರ ಶೂರಿಟಿಗಾಗಿ 20 ಲಕ್ಷ ರೂ. ಮೊತ್ತದ ಖಾಲಿ ಚೆಕ್ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ಶುಕ್ರವಾರ ತಹಶೀಲ್ದಾರರು ಹಾಗೂ ನೂರು ಅಧಿಕಾರಿ 2 ಲಕ್ಷ ರೂ ಲಂಚದ ಹಣ ಹಾಗೂ ಖಾಲಿ ಚೆಕ್ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.